ನಾಪೋಕ್ಲು, ಆ. 26: ಭಗವತಿ ಯುವಕ ಸಂಘದ ವತಿಯಿಂದ ಪ್ರತಿವರ್ಷ ಕೈಲು ಮೂಹೂರ್ತದ ಪ್ರಯುಕ್ತ ಹಮ್ಮಿಕೊಳ್ಳಲಾಗುತ್ತಿದ್ದ ಕ್ರೀಡಾಕೂಟವನ್ನು ಈ ವರ್ಷ ರದ್ದುಪಡಿಸಲಾಗಿದೆ. ಪ್ರಕೃತಿ ವಿಕೋಪದಿಂದ ಜಿಲ್ಲೆಯ ಹಲವೆಡೆ ಹಾನಿ ಉಂಟಾಗಿದ್ದು, ಈ ಸಂದರ್ಭದಲ್ಲಿ ಮನರಂಜನಾ ಕ್ರೀಡಾಕೂಟವನ್ನು ನಡೆಸುವದು ಸೂಕ್ತವಲ್ಲ ಎಂದು ತೀರ್ಮಾನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.