ಮಡಿಕೇರಿ, ಆ. 26: ಬೆಂಗಳೂರಿನ ರೇವಾ ವಿಶ್ವವಿದ್ಯಾನಿಲಯದಲ್ಲಿ ಎಂ ಟೆಕ್ (ಒ ಖಿeಛಿh) ಪದವಿಯಲ್ಲಿ (Iಟಿ ಂಜvಚಿಟಿಛಿeಜ Poತಿeಡಿ ಇಟeಛಿಣಡಿoಟಿiಛಿs) ಜಿಲ್ಲೆಯ ಅಕ್ಷಿತ್ ಅವರಿಗೆ ಚಿನ್ನದ ಪದಕ ಲಭಿಸಿದೆ. ಸಿಜಿಪಿಎ (ಅಉPಂ) 9.84 ಅತಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ರೇವಾ ವಿಶ್ವವಿದ್ಯಾನಿಲಯ ನೀಡುವ ಚಿನ್ನದ ಪದಕಕ್ಕೆ ಅಕ್ಷಿತ್ ಅವರು ಭಾಜನರಾಗಿದ್ದಾರೆ.

ಇತ್ತೀಚೆಗೆ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಬಾಯಿ ವಾಲ ಹಾಗೂ ಕರ್ನಾಟಕ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅವರಿಂದ ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರ ಪಡೆದಿದ್ದಾರೆ.

ಈಕೆ ಮೂಲತಃ ಬಿ. ಶೆಟ್ಟಿಗೇರಿ ಗ್ರಾಮದ ಹಾಗೂ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕಡೇಮಾಡ ರಾಜ ಮೊಣ್ಣಪ್ಪ ಹಾಗೂ ಸುಮ ದಂಪತಿಯರ ಪುತ್ರಿ. ತನ್ನ ಬಿಇ ಪದವಿ ವಿದ್ಯಾಭ್ಯಾಸವನ್ನು ಪೊನ್ನಂಪೇಟೆ ಸಿಐಟಿ ಕಾಲೇಜಿನಲ್ಲಿ ಪೂರೈಸಿದ್ದರು.