ಗೋಣಿಕೊಪ್ಪ ವರದಿ, ಆ. 25: ಹಾಕಿಕೂರ್ಗ್ ಅಧ್ಯಕ್ಷರಾಗಿ ಪೈಕೇರ ಕಾಳಯ್ಯ, ಪ್ರಧಾನ ಕಾರ್ಯದರ್ಶಿ ಯಾಗಿ ಬುಟ್ಟಿಯಂಡ ಚೆಂಗಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ಕಾವೇರಿ ಕಾಲೇಜು ಸಭಾಂಗಣದಲ್ಲಿ ಹಾಕಿಕೂರ್ಗ್ ಅಧ್ಯಕ್ಷ ಪೈಕೇರ ಕಾಳಯ್ಯ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರುಗಳಾಗಿ ಪಳಂಗಂಡ ಲವಕುಮಾರ್, ಕುಂತಿ ಬೋಪಯ್ಯ, ಯಮುನಾ ಚೆಂಗಪ್ಪ, ಬಿ. ಎಸ್. ಚೆಂಗಪ್ಪ, ಎಂ. ಎನ್. ಪೆಮ್ಮಯ್ಯ, ಡಾ. ಎಂ. ಎಂ. ದೇಚಮ್ಮ, ಕೆ. ಎಸ್. ಪ್ರಸಾದ್, ಖಜಾಂಜಿಯಾಗಿ ಐ. ಕೆ. ಅಯ್ಯಣ್ಣ, ಜಂಟಿ ಕಾರ್ಯದರ್ಶಿಯಾಗಿ ದಿವ್ಯಾ ಮುತ್ತಪ್ಪ ಹಾಗೂ ಕೊಕ್ಕಂಡ ರೋಶನ್, ಟೂರ್ನಮೆಂಟ್ ಕಮಿಟಿ ಮುಖ್ಯಸ್ಥರಾಗಿ ತೀತೀರ ಸೋಮಣ್ಣ, ತಾಂತ್ರಿಕ ಸಮಿತಿ ಅಧ್ಯಕ್ಷರಾಗಿ ನೆಲ್ಲಮಕ್ಕಡ ಎಂ. ಪವನ್ ಅವರನ್ನು ಆಯ್ಕೆ ಮಾಡಲಾಯಿತು.