ಮಡಿಕೇರಿ, ಆ. 25: ಬೆಂಗಳೂರಿನ ಹೆಬ್ಬಾಳ ವಿಭಾಗದಿಂದ ಕೊಡಗಿನ ಹಲವು ಯುವಕರು, ಸ್ವಯಂ ಸೇವಕರು ಇಂದು ಮಡಿಕೇರಿ ಸುತ್ತಮುತ್ತಲಿನಲ್ಲಿ ಪ್ರವಾಹ ಹಾಗೂ ಭೂಕುಸಿತದಿಂದ ಸಂತ್ರಸ್ತರಾದವರಿಗೆ ಸಹಕರಿಸಲು ಕೆಲವೊಂದು ಅಗತ್ಯ ಸಾಮಗ್ರಿಗಳೊಂದಿಗೆ ಆಗಮಿಸಿದ್ದರು.ಭಾರೀ ಅನಾಹುತ ಸಂಭವಿಸಿದ ಕೆಲವಾರು ಪ್ರದೇಶಗಳಿಗೆ ಭೇಟಿ ನೀಡಿ ತೊಂದರೆಗೊಳಗಾದವರನ್ನು ನೇರವಾಗಿ ಸಂಪರ್ಕಿಸಿ ಮಾನವೀಯ ಸ್ಪಂದನ ನೀಡಿದ ಈ ತಂಡಕ್ಕೆ ಮೊಣ್ಣಂಗೇರಿಯಲ್ಲಿ ಕೆಸರಿನಲ್ಲಿ ಸಿಲುಕಿಕೊಂಡಿದ್ದ ಒಂದು ಹಸು, ಮೂರು ನಾಯಿ ಹಾಗೂ ಅತ್ತಿತ್ತ ಚಲಿಸಲಾಗದಂತಿದ್ದ ಕೆಲವು ಕೋಳಿಗಳು ಕಂಡುಬಂದಿವೆ.ಈ ಮೂಕ ಪ್ರಾಣಿಗಳ ಒದ್ದಾಟವನ್ನು ಗಮನಿಸಿದ ಈ ಯುವಕರ ತಂಡ ರಭಸದಿಂದ ಹರಿಯುತ್ತಿದ್ದ ನೀರು... ಕಾಲು ಹಾಕಿದಲ್ಲಿ ಹೂತುಕೊಳ್ಳುತ್ತಿದ್ದ ಕೆಸರಿನ ನಡುವೆ ತೀವ್ರ ಸಾಹಸದ ಕಾರ್ಯಾಚರಣೆ ನಡೆಸಿ ಈ ಮೂಕ ಪ್ರಾಣಿಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ತಲಪಿಸುವಲ್ಲಿ ಯಶಸ್ವಿಯಾಗಿದೆ.