ಗೋಣಿಕೊಪ್ಪ, ಆ. 25: ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮಾಯಮುಡಿ ಮಾನಿಲ್ ಅಯ್ಯಪ್ಪ ಯುವಕ ಸಂಘ, ಕಾವೇರಿ ಅಸೋಸಿ ಯೇಷನ್ ಹಾಗೂ ಧರ್ಮಸ್ಥಳ ಸಂಘಗಳ ಒಕ್ಕೂಟದಿಂದ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದಡಿ ಕಸ ಹೆಕ್ಕುವ ಕಾರ್ಯಕ್ರಮ ನಡೆಯಿತು. ಚೆನ್ನಂಗೊಲ್ಲಿಯಿಂದ ಕೋಣನಕಟ್ಟೆವರೆಗೆ ರಸ್ತೆ ಬದಿಗಳಲ್ಲಿನ ಕಸವನ್ನು ಹೆಕ್ಕಿ ಸ್ವಚ್ಛತೆ ಮಾಡಲಾಯಿತು. ಗೋಣಿಕೊಪ್ಪ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್ ಕಸ ಹೆಕ್ಕಿ ಚಾಲನೆ ನೀಡಿದರು. ಪ್ರಮುಖರುಗಳಾದ ಸಣ್ಣುವಂಡ ರಮೇಶ್, ಆಪಟ್ಟೀರ ಪ್ರದೀಪ್, ಚೆಪ್ಪುಡಿರ ಪ್ರದೀಪ್, ಮಾಚಿಮಾಡ ದೇವಾನಂದ ಸೇರಿದಂತೆ ಸದಸ್ಯರು ಪಾಲ್ಗೊಂಡರು.