ಸಿದ್ದಾಪುರ, ಆ. 25: ಹಸಿರು ಕರ್ನಾಟಕ ಕಾರ್ಯಕ್ರಮದ ಅಡಿಯಲ್ಲಿ ಅರಣ್ಯ ಇಲಾಖೆ ವತಿ ಯಿಂದ ಅರಣ್ಯ ವ್ಯಾಪ್ತಿ ಯಲ್ಲಿ ಹಾಗೂ ಶಾಲೆಗಳಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು. ತಿತಿಮತಿ ವಲಯ ಅರಣ್ಯ ಇಲಾಖೆಯ ವ್ಯಾಪ್ತಿ ಒಳಪಡುವ ದಿಡ್ಡಳ್ಳಿಯ ಹಾಗೂ ತಿತಿಮತಿ ಭಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ಹಾಗೂ ಸರಕಾರಿ ಶಾಲೆಗಳಲ್ಲಿ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ವಲಯ ಅರಣ್ಯ ಅಧಿಕಾರಿ ಅಶೋಕ್ ಪರಿಸರವನ್ನು ಉಳಿಸಿ ಬೆಳೆಸುವದು ಎಲ್ಲರ ಕರ್ತವ್ಯ ಎಂದರು. ಮಾಲ್ದಾರೆಯ ಗ್ರಾಮದ ಜನಪರ ಕ್ರೀಡಾ ಹಾಗೂ ಕಲಾ ಸಂಘದ ಪದಾಧಿಕಾರಿಗಳು ಹಾಗೂ ಎ.ಸಿ.ಎಫ್‍ಗಳಾದ ಶಿವಶಂಕರ್, ಶ್ರೀಪತಿ, ಹಾಗೂ ಸಿಬ್ಬಂದಿಗಳು ಹಾಜರಿದ್ದರು.