ಮಡಿಕೇರಿ, ಆ. 25: ಇಲ್ಲಿಗೆ ಸಮೀಪದ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡನೇ ಮೊಣ್ಣಂಗೇರಿ ನಿವಾಸಿಯೋರ್ವರು ಇಂದು ಸುಳ್ಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಮೊಣ್ಣಂಗೇರಿಯಲ್ಲಿ ಭೂಕುಸಿತವುಂಟಾದ ಸಂದರ್ಭ ನೆರೆಯ ದ.ಕನ್ನಡ ಜಿಲ್ಲೆಯ ಅರಂತೋಡುವಿನ ತೆಕ್ಕಿಲ್ ಸಮುದಾಯಭವನದ ಪರಿಹಾರ ಕೇಂದ್ರಕ್ಕೆ ಸಾಗಿಸಲ್ಪಟ್ಟಿದ್ದ ಅಂಗಾರ (68) ಎಂಬವರು ಅನಾರೋಗ್ಯಕ್ಕೀಡಾಗಿದ್ದು, ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಎರಡನೇ ಮೊಣ್ಣಂಗೆÉೀರಿ ಸಂಪೂರ್ಣ ಕುಸಿತಕ್ಕೊಳಗಾಗಿದ್ದು, ಸೇತುವೆ ಕೊಚ್ಚಿಹೋಗಿದೆ. ಮೃತದೇಹವನ್ನು ಊರಿಗೆ ತರಲಾಗದೆ ಸುಳ್ಯದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ. ಮೃತರು ಪತ್ನಿ, ಈರ್ವರು ಪುತ್ರರನ್ನು ಅಗಲಿದ್ದಾರೆ.