ನಾಪೆÇೀಕ್ಲು, ಆ. 25: ಇಲ್ಲಿಗೆ ಸಮೀಪದ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲ್ಲಿ ಚಿನ್ಯಾರ್ 10 ಸಿಂಹಮಾಸ ಆರಾಧನೆ ನಡೆಯಲಿದೆ. ತಾ. 27 ರಂದು ದೇವರ ಬಲಿ, ತುಲಾಭಾರ ಮತ್ತಿತರ ಸೇವೆಗಳು ನಡೆಯಲಿದೆ
ತಾ. 28 ರಂದು ನಾಲ್ಕುನಾಡಿನಲ್ಲಿ ಕೈಲು ಮುಹೂರ್ತ ಹಬ್ಬ ನಡೆಯಲಿದ್ದು, ಸಂಜೆ 5.30 ಗಂಟೆಗೆ ಪೂರ್ವಾಭಾದ್ರಾ ನಕ್ಷತ್ರದಲ್ಲಿ ಆಯುಧ ಪೂಜೆ ನಡೆಸಲು ಸಮಯ ನಿಗದಿಪಡಿಸಲಾಗಿದೆ ಎಂದು ದೇವಾಲಯದ ದೇವತಕ್ಕ ಪರದಂಡ ಕುಟುಂಬಸ್ಥರು ತಿಳಿಸಿದ್ದಾರೆ.