ಕೂಡಿಗೆ, ಆ. 26: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಭಾನುವಾರ ಬೆಳ್ಳಗಿನ ಜಾವ ಹುಲಿ ಪ್ರತ್ಯಕ್ಷಗೊಂಡಿದ್ದು, ಸ್ಥಳೀಯ ಗ್ರಾಮಸ್ಥರಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಚಿಕ್ಕತ್ತೂರು ಗ್ರಾಮದ ರಾಜು, ಮುರುಗ ಎಂಬವರು ತಮ್ಮ ಜಮೀನಿಗೆ ತೆರಳುತಿದ್ದ ಸಂದÀರ್ಭ ಹುಲಿಯನ್ನು ಕಂಡು ಹೆದರಿ ಓಡಿದ್ದಾರೆ.

ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ತೆರಳುವಷ್ಟರಲ್ಲಿ ಹುಲಿಯು ಸಮೀಪದ ಬೆಂಡೆಬೆಟ್ಟ ಕಾಡಿಗೆ ಹೋಗಿದ್ದು, ಹುಲಿಯು ಬೆಂಡೆಬೆಟ್ಟದಿಂದ ಹುದುಗೂರು ದಾರಿಯಾಗಿ ಚಿಕ್ಕತ್ತೂರು ಕಡೆಗೆ ಬಂದಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.

ಅರಣ್ಯ ಇಲಾಖೆಯ ಸಿಬ್ಬಂದಿಗಳು ಆಗಮಿಸಿ ಹುಲಿಯ ಹೆಜ್ಜೆ ಗುರುತು ನೋಡಿ ಅರಣ್ಯದತ್ತ ತೆರಳಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಹುಲಿ ಪ್ರತ್ಯಕ್ಷವಾಗಿರುವದು ಖಚಿತವಾಗಿದೆ.