ಗೋಣಿಕೊಪ್ಪ ವರದಿ, ಆ. 25: ಶ್ರೀಮಂಗಲದ ಗದ್ದೆಯಲ್ಲಿ ದಾಂಧಲೆ ನಡೆಸಿರುವ ಕಾಡಾನೆಗಳು ಸುಮಾರು 20 ಎಕರೆ ಗದ್ದೆಯಲ್ಲಿ ಬೆಳೆನಾಶ ಮಾಡಿವೆ.
ಅಲ್ಲಿನ ಚಂಗುಲಂಡ ಕೆ. ರಾಜಪ್ಪ, ಪ್ರಭು, ಪೊನ್ನಪ್ಪ, ಬಾದುಮಂಡ ಮಹೇಶ್, ಶಂಕರ್ ಕಾರ್ಯಪ್ಪ ಹಾಗೂ ಚೆಟ್ಟಮಾಡ ಸೋಮಯ್ಯ ಅವರ ಗದ್ದೆಗೆ ಧಾಳಿ ನಡೆಸಿರುವ ಆನೆಗಳು ನಾಟಿ ಮಾಡಿರುವ ಪೈರನ್ನು ತಿಂದಿವೆ. ಗದ್ದೆಯನ್ನು ತುಳಿದು ಹಾಕಿರುವ ಆನೆಗಳು ಸಂಪೂರ್ಣ ವಾಗಿ ನಾಶ ಮಾಡಿವೆ. ನಾಟಿ ಕಳೆದು 15 ದಿನಗಳಿಗಿಂತ ಹೆಚ್ಚಾಗಿದ್ದರಿಂದ ನಾಟಿ ದಟ್ಟವಾಗಿ ಬೆಳೆದಿತ್ತು.