ಗೋಣಿಕೊಪ್ಪ ವರದಿ, ಆ. 25 : ಕುರ್ಚಿ ಹಾಗೂ ಬೀರುಗ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಸುಮಾರು 7 ಕಾಡಾನೆ ಗಳನ್ನು ಶ್ರೀಮಂಗಲ ವನ್ಯಜೀವಿ ವಲಯ ತಂಡ ಹಾಗೂ ಶ್ರೀಮಂಗಲ ಆರಆರ್‍ಟಿ ತಂಡ ಇರ್ಪು ಕುಂದ್ ಸೇರಿಸುವಲ್ಲಿ ಯಶಸ್ವಿಯಾಗಿದೆ.

ಗುರುವಾರ ಬೆಳಗ್ಗೆಯಿಂದಲೇ ಸುಮಾರು 15 ಜನರ ತಂಡ ಆನೆ ಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಆರಂಭಿಸಿತು. ಕುರ್ಚಿ ಗ್ರಾಮದ ಕಾಟಿಪಡ್ ಕಾಫಿ ತೋಟದಲ್ಲಿ ಸೇರಿಕೊಂಡಿದ್ದ ಆನೆಗಳನ್ನು ಕಾಡಿಗೆ ಅಟ್ಟಲಾಯಿತು. 4 ಗಂಟೆಗಳ ಕಾಲ ನಡೆದ ಕಾರ್ಯಾಚರಣೆ ಯಶಸ್ವಿ ಯಾಗಿದೆ.

ಬುಧವಾರ ಆನೆಗಳನ್ನು ಕಾಡಿಗಟ್ಟುವ ಸಂದರ್ಭ ಕಾಡಾನೆಗಳು ಕಾರ್ಯಾಚರಣೆಯನ್ನು ಹಿಮ್ಮೆಟ್ಟುವ ಪ್ರಯತ್ನ ನಡೆಸಿತು. ಮರಿಗಳು ಇದ್ದ ಕಾರಣ ತಾಯಿ ಆನೆ ಮರಿಗಳಿಗೆ ತೊಂದರೆಯಾಗಲಿದೆ ಎಂದು ಸಿಬ್ಬಂದಿ ಮೇಲೆರಗಲು ಬಂದ ಘಟನೆ ನಡೆಯಿತು. ಸಿಬ್ಬಂದಿ ಓಡಿ ಆನೆ ಗಳಿಂದ ತಪ್ಪಿಸಿಕೊಂಡರು. ಇದರಿಂದಾಗಿ ಅಲ್ಲಿನ ಕಾಟಿಪಡ್ ಕಾಫಿ ತೋಟದಲ್ಲಿ ಬಿಟ್ಟಿದ್ದರು.

ಅಲ್ಲಿನ ಅಜ್ಜಮಾಡ ಸಿ. ಜಯ, ಪೂಣಚ್ಚ, ಅಜ್ಜಮಾಡ ಟಿ. ಚೆಂಗಪ್ಪ ಎಂಬವರ ತೋಟದಲ್ಲಿ ಬೀಡು ಬಿಟ್ಟಿದ್ದವು. ಗ್ರಾಮದ ಕಾಫಿ ತೋಟ ಹಾಗೂ ಗದ್ದೆಗಳಲ್ಲಿನ ಬೆಳೆನಾಶ ಮಾಡುತ್ತಿದ್ದವು. 3 ಮರಿಗಳೊಂದಿಗೆ ಹಿಂಡು ಸೇರಿಕೊಂಡಿದ್ದವು. ಕಾರ್ಯಾಚರಣೆಯಲ್ಲಿ ಎಸಿಎಫ್ ದಯಾನಂದ, ಆರ್‍ಎಫ್‍ಒ ವೀರೇಂದ್ರ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.

-ವರದಿ- ಸುದ್ದಿಪುತ್ರ