ಸೋಮವಾರಪೇಟೆ, ಆ. 26: ಶಿವಮೊಗ್ಗದಲ್ಲಿ ತಾ. 18 ಮತ್ತು 19ರಂದು ನಡೆದ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ 10 ವರ್ಷದೊಳಗಿನ ವಿಭಾಗದಲ್ಲಿ ಪಿ.ಎಲ್. ಇಬ್ಬನಿ ಭಾಗವಹಿಸಿ ಕಂಚಿನ ಪದಕ ಗಳಿಸಿದ್ದಾಳೆ.
ಸ್ಪರ್ಧೆಯಲ್ಲಿ ಭಾರತ, ನೇಪಾಳ, ಅಮೆರಿಕ, ಶ್ರೀಲಂಕಾ, ಮಲೇಶಿಯಾ ಹಾಗೂ ಕೊಲಂಬಿಯ ದೇಶಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನ್ಯಾಷನಲ್ ಸ್ಯುಟಗನ್ ಕರಾಟೆ ಶಾಲೆಯ ಪೃಥ್ವಿರಾಜ್ ಗರಡಿಯಲ್ಲಿ ಕಲಿಯುತ್ತಿರುವ ಇಬ್ಬನಿ ಪಿ.ಎಲ್. ಅರಕಲಗೂಡು ತಾಲೂಕಿನ ರಾಮನಾಥಪುರದ ದಕ್ಷಿಣ ಕಾಶಿ ವಿದ್ಯಾಸಂಸ್ಥೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದಾಳೆ.
ಇವಳು ಸಮೀಪದ ಬಜೆಗುಂಡಿ ಗ್ರಾಮದ ಪಿ.ಎ. ಲೋಕೇಶ್ ಪಿ.ಎ. ಮತ್ತು ನಯನ ದಂಪತಿಗಳ ಪುತ್ರಿ.