ಸುಂಟಿಕೊಪ್ಪ, ಆ. 24: ಜಲಪ್ರಳಯದಿಂದ ತೋಟದಲ್ಲಿ ಕೂಲಿ ಕೆಲಸ ಸಿಗುತ್ತಿಲ್ಲ. ನಿರಾಶ್ರಿತರಿಗೆ ಬಂದ ಆಹಾರ ಧಾನ್ಯ ಬಟ್ಟೆ ಕಂಬಳಿ ಪ್ರಭಾವಿಗಳು ತಮಗೆ ಬೇಕಾದವರಿಗೆ ಹಂಚುತ್ತಿದ್ದಾರೆ. ಆಹಾರ ಧಾನ್ಯ ನಮಗೂ ನೀಡ ಬೇಕು ಎಂದು ಮಹಿಳೆಯರು ಹಾಗೂ ಪುರುಷ ಕಾರ್ಮಿಕರು ಪಂಚಾಯಿತಿಗೆ ಮುತ್ತಿಗೆ ಹಾಕಿ ಹಕ್ಕೋತ್ತಾಯ ಮಂಡಿಸಿದರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಮಹಿಳಾ ಒಕ್ಕೂಟದ ನೇತೃತ್ವದಲ್ಲಿ ಕೂಲಿ ಕಾರ್ಮಿಕ ಮಹಿಳೆಯರು ಹಾಗೂ ಪುರುಷರು ಭಾರೀ ಸಂಖ್ಯೆಯಲ್ಲಿ ಬಂದು ಕೆÀಲಸವಿಲ್ಲದ ನಮಗೆ ಸರಕಾರದಿಂದ ಅಕ್ಕಿ ಆಹಾರ ಧಾನ್ಯ ಒದಗಿಸ ಬೇಕೆಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರಲ್ಲಿ ತಮ್ಮ ನೋವನ್ನು ತೋಡಿಕೊಂಡರು. ಸರಕಾರದಿಂದ ಬಂದ ಅಕ್ಕಿ ಧಾನ್ಯವನ್ನು ಹಂಚಲು ಜಿಲ್ಲಾಡಳಿತ ಮೂಲಕ ನಾವು ಬದ್ಧರಾಗಿದ್ದು ಫಲಾನುಭವಿಗಳಿಗೆ ತಲಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆ ಸ್ವಯಂ ಸೇವಾ ಸಂಸ್ಥೆ, ದಾನಿಗಳು ಕೊಡಗಿಗೆ ಕಳುಹಿಸಿದ ಬಟ್ಟೆ ಕಂಬಳಿ ಆಹಾರ ಪದಾರ್ಥದ ಜವಾಬ್ದಾರಿ ನಮ್ಮ ಸುಪರ್ದಿಗೆ ಬರುವದಿಲ್ಲ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇದಪ್ಪ ಉತ್ತರಿಸಿದರು.
2ನೇ ವಿಭಾಗದ ಧರ್ಮಸ್ಥಳ ಸಂಘದ ಅಧ್ಯಕ್ಷೆ ಎಂ. ಸೆಲ್ವಿ ಮಾತ ನಾಡಿ, ಸುಂಟಿಕೊಪ್ಪ ಪಟ್ಟಣದಲ್ಲಿನ ನಿವಾಸಿಗಳು ನಿರಾಶ್ರಿತ ಕೇಂದ್ರದಲ್ಲಿ ಯಾರೂ ಉಳಿದಿಲ್ಲ. ಅಲ್ಲದೆ ಅಂತಹ ಹಾನಿ ಸುಂಟಿಕೊಪ್ಪ ನಾಗರಿಕರಿಗೆ ಸಂಭವಿಸಿಲ್ಲ ಅದರಲ್ಲಿ ಕೆಲವರು ನಿರಾಶ್ರಿತರಿಗೆ ನೀಡಿದ ಬಟ್ಟೆ ಕಂಬಳಿ, ಇನ್ನಿತರ ವಸ್ತುಗಳನ್ನು ಕಾರು, ವ್ಯಾನಿನಲ್ಲಿ ಪ್ರಭಾವಿಗಳು ಬಂದು ತಮಗೆ ಬೇಕಾದವರಿಗೆ ವಿತರಿಸುತ್ತ್ತಿರುವ ಸಂದಭರ್s ಅವರು ನಿಜವಾದ ಸಂತ್ರಸ್ತರಲ್ಲ ನೀವು ಇದನ್ನು ನಿಜವಾದ ನಿರಾಶ್ರಿತರಿಗೆ ವಿತರಿಸಿ ಎಂದಾಗ ಪ್ರಭಾವಿಗಳು ಸ್ಥಳದಿಂದ ಪಲಾಯನ ಗೈದರು. 2ನೇ ವಿಭಾಗದ ಗುಡ್ಡಪ್ಪ ರೈ ಬಡಾವಣೆ ಕೆದಕಲ್ನಲ್ಲಿ ಹೊರ ಜಿಲ್ಲೆಯಿಂದ ಬಂದ ಬಟ್ಟೆ ಇತರ ಸಾಮಗ್ರಿಗಳನ್ನು ಫಲಾನುಭವಿ ಗಳಲ್ಲದವರಿಗೆ ವಿತರಿಸಿದ್ದಾರೆ ಎಂದು ಆರೋಪಿಸಿದರು. ಮಧುರಮ್ಮ ಬಡಾವಣೆಯಲ್ಲಿ ವೃದ್ಧೆಯೊಬ್ಬರ ಮನೆ ಭಾಗಶಃ ಹಾನಿಯಾಗಿದ್ದು ಅವರಿಗೆ ಚಾಪೆ ಇತರ ವಸ್ತುಗಳನ್ನು ವಿತರಿಸುತ್ತಿರುವಾಗ ಕೆಲವರು ಕಸಿದುಕೊಂಡರು ಎಂದು ಮುತ್ತು ಅವರು ನೊಂದು ನುಡಿದರು.ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ರಹನಾ ಫೈರೋಜ್ ಮಾತನಾಡಿ ಕೆಲಸವಿಲ್ಲದ ನಮ್ಮ ಸದಸ್ಯರಿಗೆ ಆಹಾರ ಧಾನ್ಯವನ್ನು ಒದಗಿಸಲು ಮುಂದಾಗ ಬೇಕು ಎಂದುಆಗ್ರಹಿಸಿದರು.
ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ ಬಿಪಿಎಲ್ ಪಡಿತರರಿಗೆ 7 ಕೆ.ಜಿ. ಅಕ್ಕಿ ನೀಡುತ್ತಿದ್ದು ಇದನ್ನು 10 ಕೆ.ಜಿ. ವಿಸ್ತರಿಸಲು ಪ್ರಯತ್ನಿಸುವದಾಗಿ ಭರವಸೆ ನೀಡಿದರು.ಈ ಸಂದರ್ಭ ಸ್ತ್ರೀ ಶಕ್ತಿ ಸಂಘದ ಚೆಲುವಿ ಮುನಿಯಮ್ಮ ಮಂಜುಳ ತಲೆ ಹೊರೆ ಕಾರ್ಮಿಕ ಸಂಘ ಮತ್ತು ಕನ್ನಡ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ.ಎಸ್.ರವಿ ಗ್ರಾಮಾಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಜಿ.ರಾಜನ್. ಉಪಾಧ್ಯಕ್ಷ ವಿಲಿಯಂ ಮೈಕಲ್. ಸಂಚಾಲಕ ರಸಾಕ್,ಹರೀಶ. ಪೈರೋಜ್. ಇತರರು ಹಾಜರಿದ್ದರು.