ಸಿದ್ದಾಪುರ, ಆ. 22: ಕಳೆದ ಹತ್ತು ವರ್ಷಗಳಿಂದ ಸಿದ್ದಾಪುರದಲ್ಲಿ ಕೈರಳಿ ಸಮಾಜದಿಂದ ಸಾಮೂಹಿಕ ಓಣಂ ಆಚರಣೆ ಮಾಡುತಿದ್ದು ಈ ಬಾರಿ ಕೊಡಗು ಜಿಲ್ಲೆ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿ ಜಿಲ್ಲೆಯಲ್ಲಿ ಜನತೆ ಸಂಕಷ್ಟದಲ್ಲಿರುವದರಿಂದ ಈ ವರ್ಷದ ಆಚರಣೆಯನ್ನು ಕೈ ಬಿಡಲಾಗಿದೆ ಎಂದು ಕೈರಳಿ ಒಣಂ ಆಚರಣಾ ಸಮಿತಿ ಆಧ್ಯಕ್ಷ ವಿ.ಕೆ.ಲೋಕೆಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಜನತೆ ಭೀಕರ ಮಳೆಯಿಂದ ಜಲಪ್ರಳಯಕ್ಕೆ ಸಿಲುಕಿ ಸಂಕಷ್ಟದಲ್ಲಿದ್ದು ಅವರ ದುಃಖದಲ್ಲಿ ಕೈರಳಿ ಸಮಾಜ ಭಾಗಿಯಾಗಿದೆ ಎಂದರು. ಓಣಂ ಆಚರಣೆಯ ಹಿಂದಿನ ದಿನ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಭಾಗದ ಯಾರೆಲ್ಲ ನೆರೆ ಸಂತ್ರಸ್ತರಾಗಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೊ ಅಂತಹವರ ಮನೆಗಳಿಗೆ ತೆರಳಿ ಅಕ್ಕಿ ಹಾಗೂ ಪಡಿತರ ಸೇರಿದಂತೆ ಓಣಂ ಕಿಟ್ ವಿತರಿಸಲಾಗುವದು ಎಂದರು.

ಸಮಾಜದ ಅಧ್ಯಕ್ಷ ಕೆ.ಕೆ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯು ಭಾರಿ ಮಳೆಗೆ ನಲುಗಿದ್ದು ಜಿಲ್ಲೆಯ ಜನತೆಯ ಪರಿಸ್ಥಿತಿ ನೋಡಿ ಓಣಂ ಆಚರಣೆಯನ್ನು ಕೈ ಬಿಟ್ಟು ಅವರುಗಳ ನೋವಿನಲ್ಲಿ ಭಾಗಿಯಾಗುತಿದ್ದು ಸಮಾಜ ಆವರುಗಳಿಗೆ ಬೇಕಾದ ಎಲ್ಲಾ ಸಹಾಯಗಳನ್ನು ಮುಂದಿನ ದಿನಗಳಲ್ಲಿ ನೀಡಲಿದೆ ಎಂದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಗಿರೀಶ್, ಖಜಾಂಜಿ ಕೆ.ಆರ್. ವಿಜಯನ್ ಸೇರಿದಂತೆ ಪದಾದಿಕಾರಿಗಳು ಇದ್ದರು.

*ವೀರಾಜಪೇಟೆ: ಕೊಡಗಿಗೆ ಸುರಿದ ಮಳೆಗೆ ಕೊಡಗಿನ ಅನೇಕ ಮಂದಿ ಅಮಾಯಾಕರು ಆಸ್ತಿ ಪಾಸ್ತಿ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಇನ್ನು ಕೆಲವರು ಭೂ ಕುಸಿತದ ದುರಂತಕ್ಕೊಳಗಾಗಿ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವದರಿಂದ ವೀರಾಜಪೇಟೆಯ ಮುತ್ತಪ್ಪ ದೇವಸ್ಥಾನ ಓಣಂ ಆಚರಣಾ ಸಮಿತಿಯಿಂದ ಸೆಪ್ಟಂಬರ್ 2ರಂದು ಹಮ್ಮಿಕೊಂಡಿದ್ದ ಉತ್ಸವದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಉತ್ಸವ ವೆಚ್ಚದ ರೂ ಎರಡು ಲಕ್ಷ ಹಣವನ್ನು ಕೊಡಗು ನೆರೆ ಸಂತ್ರಸ್ತ ನಿಧಿಗೆ ಕಳಿಸಲಾಗುವದು ಎಂದು ಸಮಿತಿಯ ಅಧ್ಯಕ್ಷ ಇ.ಸಿ.ಜೀವನ್ ತಿಳಿಸಿದ್ದಾರೆ.ಓಣಂ ಆಚರಣೆ ಇಲ್ಲ

ಸಿದ್ದಾಪುರ, ಆ. 22: ಕಳೆದ ಹತ್ತು ವರ್ಷಗಳಿಂದ ಸಿದ್ದಾಪುರದಲ್ಲಿ ಕೈರಳಿ ಸಮಾಜದಿಂದ ಸಾಮೂಹಿಕ ಓಣಂ ಆಚರಣೆ ಮಾಡುತಿದ್ದು ಈ ಬಾರಿ ಕೊಡಗು ಜಿಲ್ಲೆ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿ ಜಿಲ್ಲೆಯಲ್ಲಿ ಜನತೆ ಸಂಕಷ್ಟದಲ್ಲಿರುವದರಿಂದ ಈ ವರ್ಷದ ಆಚರಣೆಯನ್ನು ಕೈ ಬಿಡಲಾಗಿದೆ ಎಂದು ಕೈರಳಿ ಒಣಂ ಆಚರಣಾ ಸಮಿತಿ ಆಧ್ಯಕ್ಷ ವಿ.ಕೆ.ಲೋಕೆಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಜನತೆ ಭೀಕರ ಮಳೆಯಿಂದ ಜಲಪ್ರಳಯಕ್ಕೆ ಸಿಲುಕಿ ಸಂಕಷ್ಟದಲ್ಲಿದ್ದು ಅವರ ದುಃಖದಲ್ಲಿ ಕೈರಳಿ ಸಮಾಜ ಭಾಗಿಯಾಗಿದೆ ಎಂದರು. ಓಣಂ ಆಚರಣೆಯ ಹಿಂದಿನ ದಿನ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಭಾಗದ ಯಾರೆಲ್ಲ ನೆರೆ ಸಂತ್ರಸ್ತರಾಗಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೊ ಅಂತಹವರ ಮನೆಗಳಿಗೆ ತೆರಳಿ ಅಕ್ಕಿ ಹಾಗೂ ಪಡಿತರ ಸೇರಿದಂತೆ ಓಣಂ ಕಿಟ್ ವಿತರಿಸಲಾಗುವದು ಎಂದರು.

ಸಮಾಜದ ಅಧ್ಯಕ್ಷ ಕೆ.ಕೆ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯು ಭಾರಿ ಮಳೆಗೆ ನಲುಗಿದ್ದು ಜಿಲ್ಲೆಯ ಜನತೆಯ ಪರಿಸ್ಥಿತಿ ನೋಡಿ ಓಣಂ ಆಚರಣೆಯನ್ನು ಕೈ ಬಿಟ್ಟು ಅವರುಗಳ ನೋವಿನಲ್ಲಿ ಭಾಗಿಯಾಗುತಿದ್ದು ಸಮಾಜ ಆವರುಗಳಿಗೆ ಬೇಕಾದ ಎಲ್ಲಾ ಸಹಾಯಗಳನ್ನು ಮುಂದಿನ ದಿನಗಳಲ್ಲಿ ನೀಡಲಿದೆ ಎಂದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಗಿರೀಶ್, ಖಜಾಂಜಿ ಕೆ.ಆರ್. ವಿಜಯನ್ ಸೇರಿದಂತೆ ಪದಾದಿಕಾರಿಗಳು ಇದ್ದರು.

*ವೀರಾಜಪೇಟೆ: ಕೊಡಗಿಗೆ ಸುರಿದ ಮಳೆಗೆ ಕೊಡಗಿನ ಅನೇಕ ಮಂದಿ ಅಮಾಯಾಕರು ಆಸ್ತಿ ಪಾಸ್ತಿ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಇನ್ನು ಕೆಲವರು ಭೂ ಕುಸಿತದ ದುರಂತಕ್ಕೊಳಗಾಗಿ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವದರಿಂದ ವೀರಾಜಪೇಟೆಯ ಮುತ್ತಪ್ಪ ದೇವಸ್ಥಾನ ಓಣಂ ಆಚರಣಾ ಸಮಿತಿಯಿಂದ ಸೆಪ್ಟಂಬರ್ 2ರಂದು ಹಮ್ಮಿಕೊಂಡಿದ್ದ ಉತ್ಸವದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಉತ್ಸವ ವೆಚ್ಚದ ರೂ ಎರಡು ಲಕ್ಷ ಹಣವನ್ನು ಕೊಡಗು ನೆರೆ ಸಂತ್ರಸ್ತ ನಿಧಿಗೆ ಕಳಿಸಲಾಗುವದು ಎಂದು ಸಮಿತಿಯ ಅಧ್ಯಕ್ಷ ಇ.ಸಿ.ಜೀವನ್ ತಿಳಿಸಿದ್ದಾರೆ.