ಗೋಣಿಕೊಪ್ಪ ವರದಿ, ಆ. 23: ಅರ್ವತೊಕ್ಲು ಸರ್ವದೈವತಾ ಶಾಲೆಯಲ್ಲಿ ಗೋಣಿಕೊಪ್ಪ ರೋಟರಿ ಸಂಸ್ಥೆ ವತಿಯಿಂದ ಸರ್ವದೈವತಾ ಇಂಟರಾಕ್ಟ್ ಪದಾಧಿಕಾರಿಗಳಿಗೆ ಪದಗ್ರಹಣ ನಡೆಯಿತು.

ಅಧ್ಯಕ್ಷರಾಗಿ ಧನ್ಯ, ಕಾರ್ಯದರ್ಶಿಯಾಗಿ ದೇಚಮ್ಮ ಪದಗ್ರಹಣ ಸ್ವೀಕರಿಸಿದರು. ಗೋಣಿಕೊಪ್ಪ ರೋಟರಿ ಅಧ್ಯಕ್ಷ ಪಾರುವಂಗಡ ದಿಲನ್ ಚಂಗಪ್ಪ ಪದಗ್ರಹಣ ಬೋಧಿಸಿ, ನಾಯಕತ್ವ ಗುಣ ಹೆಚ್ಚಿಸಿಕೊಳ್ಳಲು ಸಲಹೆ ನೀಡಿದರು.

ಈ ಸಂದರ್ಭ ಮುಖ್ಯಶಿಕ್ಷಕಿ ಲಲಿತಾ ಮೊಣ್ಣಪ್ಪ, ಇಂಟರಾಕ್ಟ್ ಕ್ಲಬ್ ಸಂಚಾಲಕ ಪ್ರದೀಪ್ ಪಾಲ್ಗೊಂಡಿದ್ದರು.