ಮಡಿಕೇರಿ, ಆ. 21: ಕಳೆದ ಆರೆಂಟು ದಿನಗಳಲ್ಲಿ ಗಾಳಿ-ಮಳೆಯ ತೀವ್ರತೆ ನಡುವೆ ಭೂಕುಸಿತದೊಂದಿಗೆ ಜಲಸ್ಫೋಟದಿಂದ ಭಯಗೊಂಡಿರುವ ನೂರಾರು ಗ್ರಾಮೀಣ ಕುಟುಂಬಗಳು ಮನೆಗಳನ್ನು ತೊರೆದು ಪ್ರಾಣ ರಕ್ಷಣೆಗಾಗಿ ಪರಿತಪಿಸುತ್ತಿರುವ ಕರುಣಾ ಜನಕ ದೃಶ್ಯ ಹಲವೆಡೆ ಗೋಚರಿಸಿದೆ. ಮಡಿಕೇರಿ ತಾಲೂಕಿನ ಮುಕ್ಕೋಡ್ಲು, ಅವಂಡಿ, ಕಾಲೂರು ವ್ಯಾಪ್ತಿಯ ಸೀತಾರಾಮ ಪಾಟಿ, ಮೊಣ್ಣಂಗೇರಿ, ಮೇಕೇರಿ, ಚೇರಂಬಾಣೆ ಸುತ್ತಮುತ್ತಲಿನ ಚೆಟ್ಟಿಮಾನಿ ತನಕ ಬಹು ಮಂದಿ ಮನೆ ತೊರೆದಿದ್ದಾರೆ.ಇತ್ತ ಮಡಿಕೇರಿ ಸೋಮವಾರಪೇಟೆ ಹೆದ್ದಾರಿಯ ಅಕ್ಕ-ಪಕ್ಕ ಉದಯಗಿರಿ, ಕರ್ಣಂಗೇರಿ, ಹೆಮ್ಮೆತ್ತಾಳು, ಮೇಘತಾಳು, ಹಾಲೇರಿ, ಕಾಂಡನಕೊಲ್ಲಿ, ಹಟ್ಟಿಹೊಳೆ ಸುತ್ತಮುತ್ತ ಊರಿಗೆ ಊರೇ ಖಾಲಿಯಗಿದೆ. ಈ ಎಲ್ಲೆಡೆಯ ಸಾವಿರಾರು ಮಂದಿ ಅಲ್ಲಲ್ಲಿ ಸಂತ್ರಸ್ತರ ಪರಿಹಾರ ಕೇಂದ್ರಗಳಲ್ಲಿ ಆಸರೆ ಪಡೆದಿದ್ದಾರೆ. ಬದಲಾಗಿ ತಮ್ಮದೆಲ್ಲವನ್ನು ಕಳೆದುಕೊಂಡಿರುವ ದುಃಖದಲ್ಲಿ ಭವಿಷ್ಯದ ಬದುಕಿಗಾಗಿ ಕಣ್ಣೀರುಗರೆಯುತ್ತಿದ್ದಾರೆ.

ಅಧ್ಯಕ್ಷರ ಆಸರೆ : ಗಾಳಿಬೀಡು ಗ್ರಾ.ಪಂ. ಅಧ್ಯಕ್ಷ ಪುದಿಯತ್ತಂಡ ಸುಭಾಷ್ ಸೋಮಯ್ಯ ತನ್ನ ಗ್ರಾಮದ ವಾಸ ಮನೆ ನೆಲಸಮಗೊಂಡಿದ್ದರೂ, ಮಡಿಕೇರಿ ನಿವಾಸದಲ್ಲಿ ಆವಂಡಿ ಗ್ರಾಮದ 35 ಮಂದಿಗೆ ಆಸರೆ ಕಲ್ಪಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಸೇವಾಭಾರತಿ, ಕೊಡವ ಸಮಾಜ, ಗೌಡ ಸಮಾಜ, ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ, ಜಿಲ್ಲಾಡಳಿತ, ರೋಟರಿಯಂತಹ ಸೇವಾ ಸಂಸ್ಥೆಗಳ ಜತೆಗೆ ಅನೇಕ ಸಂಘ ಸಂಸ್ಥೆ, ಸಮಾಜಗಳು ಹಿಂದೂ, ಮುಸ್ಲಿಂ, ಕ್ರೈಸ್ತ ಸಂಘಟನೆಗಳು ಒಂದೆಡೆ ಮಾನವೀಯ ನೆಲೆಯಲ್ಲಿ ಸೇವೆಗೆ ಮುಂದಾಗಿವೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್, ಭಾರತೀಯ ಜನತಾ ಪಾರ್ಟಿ, ಸಂಸದೆ ಶೋಭಾ ಕರಂದ್ಲಾಜೆ, ಮಾಜೀ ಉಪ ಮುಖ್ಯಮಂತ್ರಿ (ಮೊದಲ ಪುಟದಿಂದ) ತಡೆಯುವದರೊಂದಿಗೆ, ಕೆಲವು ವಾಹನಗಳಿಗೆ ಸಂತ್ರಸ್ತರ ನೆರವಿನ ಹೆಸರಿನಲ್ಲಿ ಬ್ಯಾನರ್, ಭಿತ್ತಿಪತ್ರ ಅಳವಡಿಸಿಕೊಂಡು ವ್ಯವಸ್ಥಿತವಾಗಿ ಆಹಾರ ವಸ್ತುಗಳು, ವಸ್ತ್ರ ಸಹಿತ ಎಲ್ಲಾ ಸಾಮಾಗ್ರಿಗಳನ್ನು ದೋಚುತ್ತಿರುವ ಕುರಿತು ಮಾಹಿತಿ ಲಭಿಸಿದೆ ಎಂದರು.

ಈ ಬಗ್ಗೆ ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತಂದಿರುವದಾಗಿ ವಿವರಿಸಿದ ಶಾಸಕರು, ಪ್ರಾಕೃತಿಕ ವಿಕೋಪದಿಂದ ತತ್ತರಿಸಿರುವ ಗ್ರಾಮೀಣ ಜನತೆಗೆ ಇನ್ನು ನೆರವು ಲಭಿಸಿಲ್ಲವೆಂದು ಬೊಟ್ಟು ಮಾಡಿದರು.

ಒಗ್ಗೂಡಿ ಕಣ್ಣೀರು ಒರೆಸೋಣ : ಮಡಿಕೇರಿ ತಾಲೂಕು ಹಾಗೂ ಸೋಮವಾರಪೇಟೆ ತಾಲೂಕಿನ ಕೆಲವರು ಗ್ರಾಮಸ್ಥರು ತೀವ್ರ ತೊಂದರೆಗೆ ಸಿಲುಕಿ ಕಣ್ಣೀರಿನ ಬದುಕು ನಡೆಸುತ್ತಿದ್ದರೂ, ಸ್ವಾಭಿಮಾನದಿಂದ ಸಂತ್ರಸ್ತರ ಪರಿಹಾರ ಕೇಂದ್ರಗಳಿಗೂ ಬಾರದೆ ಬಂಧುವರ್ಗದ ಆಸರೆಯಲ್ಲಿದ್ದು, ಅಂತಹವರ ಮನೆ ಬಾಗಿಲಿಗೆ ನೆರವು ಒದಗಿಸಬೇಕೆಂದು ಅವರು ಸಲಹೆ ನೀಡಿದರು.

ನಾಡಿನ ಜನತೆ ನೊಂದವರ ಕಣ್ಣೀರು ಒರೆಸುವಲ್ಲಿ ಏಕತಾ ಭಾವದಿಂದ ಸಮರೋಪಾದಿ ಯಲ್ಲಿ ಕಾರ್ಯದಲ್ಲಿ ತೊಡಗುವಂತೆಯೂ ಅವರು ಕರೆ ನೀಡಿದರು.

ಸರಕಾರ ವರದಿ ನೀಡಲಿ : ಜಿಲ್ಲೆಯಲ್ಲಿ ಮನೆ, ಆಸ್ತಿ, ಜಮೀನು ಸಹಿತ ಒಡವೆ ವಸ್ತುಗಳನ್ನು ಕಳೆದುಕೊಂಡು ದುರಂತಕ್ಕೆ ಒಳಗಾಗಿರುವ ಕುಟುಂಬಗಳ ಸಮಗ್ರ ಮಾಹಿತಿ ಕಲೆ ಹಾಕಿ ಶೀಘ್ರವೇ ಜಿಲ್ಲಾಡಳಿತದಿಂದ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸುವಂತೆ ಒತ್ತಾಯಿಸಿದ ಬೋಪಯ್ಯ, ರಾಜ್ಯದಿಂದ ಕೇಂದ್ರಕ್ಕೂ ಸಮರ್ಪಕ ವರದಿ ಸಲ್ಲಿಸಿ ಆ ಮೂಲಕ ನೆರವಿಗೆ ಪ್ರಸ್ತಾವನೆ ಸಲ್ಲಿಸಬೇಕೆಂದು ಆಗ್ರಹಪಡಿಸಿದರು.

ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ ಸಹಿತ ಶಾಸಕರು ಮೇಕೇರಿ, ಚೇರಂಬಾಣೆ, ಚೆಟ್ಟಿಮಾನಿ ಮುಂತಾದೆಡೆ ಸಂತ್ರಸ್ತರ ಕೇಂದ್ರಗಳಿಗೆ ಖುದ್ದು ತೆರಳಿ ನೋವನ್ನು ಆಲಿಸಿದರು. ಬಳಿಕ ಕರ್ಣಂಗೇರಿಯ ಮೊಳಕಾಲ್ಮುರಿ ಸಂತ್ರಸ್ತರ ಕೇಂದ್ರ ಹಾಗೂ ಉದಯಗಿರಿ ಬೆಟ್ಟ ಕುಸಿದು 23 ಮನೆಗಳು ಧ್ವಂಸಗೊಂಡಿರುವ ಭಯಾನಕ ದೃಶ್ಯ ವೀಕ್ಷಿಸಿದರು.

ನೊಂದವರ ಬೇಡಿಕೆಗಳನ್ನು ಆಲಿಸಿದ ಜನಪ್ರತಿನಿಧಿಗಳು, ತಕ್ಷಣಕ್ಕೆ ಅನ್ನ, ವಸ್ತ್ರ, ಆರೋಗ್ಯ ಸೇವೆಗಳೊಂದಿಗೆ ಮಳೆ ಇಳಿಮುಖಗೊಂಡ ಬಳಿಕ ತುರ್ತು ಆಸರೆಗೆ ಅಗತ್ಯ ಕ್ರಮದ ಆಶ್ವಾಸನೆ ನೀಡಿದರು.