ಮಡಿಕೇರಿ, ಆ. 21: ಅತಿವೃಷ್ಟಿ-ಅನಾಹುತಗಳ ಹಿನ್ನೆಲೆ ಚೇರಂಗಾಲ ಮತ್ತು ತಾವೂರು ಗ್ರಾಮಗಳಲ್ಲಿ ಈ ಬಾರಿಯ ಕೈಲು ಮುಹೂರ್ತ ಹಬ್ಬದ ವಿಜೃಂಭಣೆಯನ್ನು ಕೈಬಿಡಲಾಗಿದ್ದು, ಕ್ರೀಡಾಕೂಟಗಳನ್ನು ಕೂಡ ನಡೆಸದಿರಲು ನಿರ್ಧರಿಸಲಾಗಿದೆ ಎಂದು ಈ ಗ್ರಾಮಗಳ ದೇವಾಲಯದ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.