ಮಡಿಕೇರಿ, ಆ. 21: ತೀವ್ರ ಮಳೆ-ಗಾಳಿಯಿಂದ ಭೂಕುಸಿತ ಉಂಟಾಗಿ ಕೊಡಗಿನ ಬಹುತೇಕ ಕಡೆ ಸಂಭವಿಸಿದ ಭಾರೀ ದುರಂತದ ಸಂದರ್ಭ ಸಿಲುಕಿಕೊಂಡ 1735 ಮಂದಿ ಅಮಾಯಕರನ್ನು ವಿವಿಧ ರಕ್ಷಣಾ ಪಡೆಗಳು ಪ್ರಾಣಾಪಾಯದಿಂದ ಪಾರು ಮಾಡಿ ಸುರಕ್ಷಿತ ಸ್ಥಳಕ್ಕೆ ಸಾಗಿಸಿವೆ ಎಂದು ರಾಜ್ಯ ಕೆಎಸ್ಆರ್ಪಿ ಎಡಿಜಿಪಿ ಭಾಸ್ಕರ್ ರಾವ್ ತಿಳಿಸಿದರು.ಇಂದು ಇಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಇದುವರೆಗಿನ ಅಧಿಕೃತ ಮಾಹಿತಿ ಅನ್ವಯ 7 ಮಂದಿ ಸಾವಿಗೀಡಾಗಿದ್ದು, ನಾಲ್ಕು ಮಂದಿ ಕಾಣೆಯಾಗಿದ್ದಾರೆ. ಅಲ್ಲದೆ ಅನೇಕ ಪ್ರತ್ಯಕ್ಷದರ್ಶಿಗಳ ಪ್ರಕಾರ ಇನ್ನೂ ಹಲವರು ಮನೆ ಹಾಗೂ ಭೂಕುಸಿತದ ಸಂದರ್ಭ ಕೊಚ್ಚಿ ಹೋಗಿದ್ದಾರೆ ಎನ್ನುವ ಸಂಶಯವಿದೆ. ಅಲ್ಲದೆ ಜಾನುವಾರುಗಳು, ಸಾಕು ಪ್ರಾಣಿಗಳು ಸಿಲುಕಿಕೊಂಡು ಕಣ್ಮರೆಯಾಗಿವೆ ಎನ್ನುವ ಮಾಹಿತಿಯಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ಡಿಜಿಪಿ ನೀಲಮಣಿ ರಾಜು ಅವರ ನಿರ್ದೇಶನದ ಮೇರೆಗೆ ಎಂಟು ಡ್ರೋನ್ಗಳನ್ನು ಜಿಲ್ಲೆಗೆ ತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ತೀವ್ರ ಹಾನಿಗೀಡಾದ ಪ್ರದೇಶಗಳಿಗೆ ತೆರಳಿ ಡ್ರೋನ್ಗಳ ಬಳಕೆ ಮೂಲಕ ನಾಪತ್ತೆಯಾದವರನ್ನು ಸಂಭವನೀಯ ಮೃತರಾದವರನ್ನು ಕಾಣೆಯಾದ ಜಾನುವಾರು, ಸಾಕುಪ್ರಾಣಿಗಳನ್ನು ಪತ್ತೆ ಹಚ್ಚÀಲು ಕ್ರಮಕೈಗೊಳ್ಳಲಾಗಿದೆ ಎಂದು ಭಾಸ್ಕರ್ರಾವ್ ವಿವರಿಸಿದರು.
ಜಿಲ್ಲೆಯಲ್ಲಿ ರಕ್ಷಣಾ ಪಡೆಗಳ ಕಾರ್ಯವನ್ನು ಸದ್ಯಕ್ಕೆ ಸ್ಥಗಿತ ಗೊಳಿಸಲಾಗಿದೆ. ಸಂಕಷ್ಟಕ್ಕೆ ಸಿಲುಕಿದ ವರನ್ನು ಸಂರಕ್ಷಿಸಿರುವ ಸಂತೃಪ್ತಿಯಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪಣ್ಣೇಕರ್ ಅವರ ನೇತೃತ್ವದಲ್ಲಿ ರಾಜ್ಯ, ಕೇಂದ್ರದ ಸಂಪೂರ್ಣ ಸಹಕಾರದೊಂದಿಗೆ ರಕ್ಷಣಾ ಪಡೆಗಳು ಪ್ರಾಣದ ಹಂಗು ತೊರೆದು ಸಂಕಷ್ಟಕ್ಕೀಡಾದವರನ್ನು ಸಕಾಲಿಕವಾಗಿ ರಕ್ಷಿಸಿವೆ. ಎಸ್ಡಿಆರ್ಎಫ್, ಎನ್ಡಿಆರ್ಎಫ್, ಇಂಡಿಯನ್ ಆರ್ಮಿ, ಸಿವಿಲ್ ಡಿ ಫೆನ್ಸ್, ಏರ್ಫೋರ್ಸ್ ತಂಡಗಳು ಸಕಾಲಿಕವಾಗಿ ಪ್ರಾಣ ರಕ್ಷಣಾ ಕಾರ್ಯವನ್ನು ಸಫಲಗೊಳಿಸಿವೆ.
ಪೊಲೀಸ್ ಇಲಾಖಾ ಸಿಬ್ಬಂದಿ, ಗೃಹ ರಕ್ಷಕ ದಳಗಳು ಕೈಜೋಡಿಸಿವೆ. ಎಲ್ಲಕ್ಕಿಂತ ಮಿಗಿಲಾಗಿ ಜಿಲ್ಲೆಯ ಅನೇಕ ಸ್ವಯಂ ಸೇವಾ ಸಂಘಗಳು, ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಂಡ ಯುವಕರ ತಂಡ, ಅಲ್ಲಲ್ಲಿನ ಸ್ಥಳೀಯ ಸಾಹಸಿಗರು ಸಾವಿರಾರು ಮಂದಿ ಸಂಕಷ್ಟಕ್ಕೀಡಾದವರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಇಂತವರಿಗೆ ಇಲಾಖೆ ಆಭಾರಿಯಾಗಿದೆ ಎಂದು ಭಾಸ್ಕರ್ ರಾವ್ ಸ್ಮರಿಸಿಕೊಂಡರು.
ಕಾರ್ಯಾಚರಣೆ ಸ್ಥಗಿತ ಗೊಂಡರೂ ರಕ್ಷಣಾ ಪಡೆಗಳು ಜಿಲ್ಲೆಯಲ್ಲಿಯೆ ಕೆಲದಿನಗಳ ಕಾಲ ನೆಲೆಗೊಂಡಿರುತ್ತವೆ. ಡ್ರೋನ್ ಬಳಕೆ ಬಳಿಕ ಅವಶೇಷಗಳ ಪತ್ತೆ ಕಾರ್ಯ ಪೂರ್ಣಗೊಂಡ ಬಳಿಕವಷ್ಟೆ ರಕ್ಷಣಾ ಪಡೆಗಳನ್ನು ಹಿಂದಕ್ಕೆ ಕಳುಹಿಸಲಾಗುತ್ತದೆ ಎಂದರು.
ಅನಧಿಕೃತ ಸಂಗ್ರಹಕ್ಕೆ ಕಡಿವಾಣ
ಇದೀಗ 41 ಕಡೆ ಪರಿಹಾರ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, 5 ಸಾವಿರದಷ್ಟು ಮಂದಿ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಈ ಮಂದಿಗೆ ರಾಜ್ಯದ ವಿವಿಧೆಡೆಗಳಿಂದ ಸಹಾಯ ರೂಪದಲ್ಲಿ ವಸ್ತುಗಳು ಹರಿದು ಬರುತ್ತಿವೆ. ಆದರೆ, ಯಾವ ಸಂಘ-ಸಂಸ್ಥೆಗಳು ಕೂಡ
ರಾವ್ ಸ್ಮರಿಸಿಕೊಂಡರು.
ಕಾರ್ಯಾಚರಣೆ ಸ್ಥಗಿತ ಗೊಂಡರೂ ರಕ್ಷಣಾ ಪಡೆಗಳು ಜಿಲ್ಲೆಯಲ್ಲಿಯೆ ಕೆಲದಿನಗಳ ಕಾಲ ನೆಲೆಗೊಂಡಿರುತ್ತವೆ. ಡ್ರೋನ್ ಬಳಕೆ ಬಳಿಕ ಅವಶೇಷಗಳ ಪತ್ತೆ ಕಾರ್ಯ ಪೂರ್ಣಗೊಂಡ ಬಳಿಕವಷ್ಟೆ ರಕ್ಷಣಾ ಪಡೆಗಳನ್ನು ಹಿಂದಕ್ಕೆ ಕಳುಹಿಸಲಾಗುತ್ತದೆ ಎಂದರು.
ಅನಧಿಕೃತ ಸಂಗ್ರಹಕ್ಕೆ ಕಡಿವಾಣ
ಇದೀಗ 41 ಕಡೆ ಪರಿಹಾರ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, 5 ಸಾವಿರದಷ್ಟು ಮಂದಿ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಈ ಮಂದಿಗೆ ರಾಜ್ಯದ ವಿವಿಧೆಡೆಗಳಿಂದ ಸಹಾಯ ರೂಪದಲ್ಲಿ ವಸ್ತುಗಳು ಹರಿದು ಬರುತ್ತಿವೆ. ಆದರೆ, ಯಾವ ಸಂಘ-ಸಂಸ್ಥೆಗಳು ಕೂಡ
ಕ್ರಮ ಜರುಗಿಸಲಾಗುವದೆಂದು ಮುನ್ನೆಚ್ಚರಿಕೆಯಿತ್ತರು.
ಪೊಲೀಸ್ ಇಲಾಖೆಯಿಂದ ರಕ್ಷಣಾ ಕಾರ್ಯದ ಪ್ರಾರಂಭಿಕ ಕೆಲಸ ಮುಗಿದಿದೆ. ಜಿಲ್ಲಾಡಳಿತವು ಪರಿಹಾರ ಕೇಂದ್ರಗಳ ಮೂಲಕ ಸಂತ್ರಸ್ತರ ನೆರವಿಗೆ ಕ್ರಮಕೈಗೊಂಡಿದೆ. ಮುಂದೆ ಎಲ್ಲರ ನೆರವಿನಿಂದ ಸಂತ್ರಸ್ತರ ಪುನರ್ವಸತಿ ಕಾರ್ಯ ನಡೆಯಬೇಕಿದೆ ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದರು.
ಜ್ಯೋತಿಷಿಗಳ ವಿರುದ್ಧ ಕ್ರಮ
ಇಂತಹ ದುಃಖದ ಸನ್ನಿವೇಶದಲ್ಲಿ ಕೆಲವು ದೃಶ್ಯ ಮಾಧ್ಯಮಗಳ ಮೂಲಕ ಕೆಲವು ಜ್ಯೋತಿಷಿಗಳು ಮೊದಲೇ ಭಯಭೀತರಾಗಿರುವ ಜನರನ್ನು ಜ್ಯೋತಿಷ್ಯದ ಹೆಸರಿನಲ್ಲಿ ಹೆದರಿಸುತ್ತಿದ್ದಾರೆ. ದೇವರಿಗೆ ಕೋಪ ಬಂದಿದೆ, ಜನರು ತಪ್ಪು ಮಾಡಿರುವದರಿಂದ ಹೀಗಾಗಿದೆ ಎನ್ನುವ ಅನವಶ್ಯಕ ಪ್ರಲಾಪಗಳ ಮೂಲಕ ತಮ್ಮ ವೈಯಕ್ತಿಕ ಧನಲಾಭಕ್ಕಾಗಿ ಅಮಾಯಕ ಜನರನ್ನು ಭಯಭೀತರಾಗಿಸುತ್ತಿದ್ದಾರೆ. ಈ ಜ್ಯೋತಿಷಿಗಳು ಆಧುನಿಕ ಉಗ್ರಗಾಮಿಗಳಾಗಿದ್ದಾರೆ. ಇದು ಹೀಗೆಯೆ ಮುಂದುವರೆದರೆ ಇಂತಹ ಪ್ರಕರಣಗಳನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿ ಕ್ರಮಕೈಗೊಳ್ಳಲಾಗುತ್ತದೆ. ಸಾಮಾಜಿಕ ಜಾಲ ತಾಣದಲ್ಲಿಯೂ ಅನೇಕ ವದಂತಿಗಳನ್ನು ಹಬ್ಬಿಸಿ ಜನರನ್ನು ಭಯಪಡಿಸುತ್ತಿರುವವರ ವಿರುದ್ಧವೂ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ ಭಾಸ್ಕರ್ ರಾವ್ ಅವರು, ಇಂತಹ ದುಸ್ಥಿತಿ ಸಂದರ್ಭ ಮಾನವೀಯತೆ ಪ್ರದರ್ಶಿಸಲಿ ಎಂದು ಸಲಹೆಯಿತ್ತರು.
ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ವಲಯ ಐಜಿಪಿ ಶರತ್ಚಂದ್ರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪಣ್ಣೇಕರ್ ಉಪಸ್ಥಿತರಿದ್ದರು.