ಸುಂಟಿಕೊಪ್ಪ, ಆ. 20: ನೀರು, ವಿದ್ಯುತ್, ರಸ್ತೆ, ಚರಂಡಿ, ಆನೆ ಹಾವಳಿ, ಸೋಲಾರ್ ದೀಪ, ಸೂರು ನಿರ್ಮಿಸಿರುವದಕ್ಕೆ ಹಕ್ಕುಪತ್ರ ನೀಡಬೇಕು ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಗ್ರಾಮ ¸ಭೆಯಲ್ಲಿ ಕಳಕಳಿಯ ಮನವಿ ಮುಂದಿಟ್ಟರು.
ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿಯ 2018-19ನೇ ಸಾಲಿನ ಗ್ರಾಮ ಸಭೆಯು ಕಾನ್‍ಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿ.ಆರ್. ರಂಜಿನಿ ಅಧ್ಯಕ್ಷತೆಯಲ್ಲಿ ನಡೆಯಿತು.
ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿಯ ಹೇರೂರು ಗ್ರಾಮದಲ್ಲಿ ಬೇಸಿಗೆಯಲ್ಲಿ ನೀರು ಲಭಿಸುತ್ತಿಲ್ಲಾ ಮಳೆಗಾಲದಲ್ಲಿ ಯಾವಾಗಲೋ ಒಮ್ಮೊಮ್ಮೆ ನೀರು ಬರುತ್ತದೆ. ರಸ್ತೆ, ಚರಂಡಿ, ಬೀದಿ ದೀಪ ಇಲ್ಲ. ಆಶ್ರಯ ಯೋಜನೆಯಡಿ ನಿರ್ಮಿಸಿದ ಮನೆಗಳು ಕುಸಿದು ಬೀಳುವ ಸ್ಥಿತಿಯಲ್ಲಿದೆ ಹಕ್ಕುಪತ್ರ ಸಿಕ್ಕಿಲ್ಲ ಎಂದು ಹೇರೂರು ಗ್ರಾಮದ ಮೀನಾಕ್ಷಿ, ಲಕ್ಷ್ಮಿ, ಗಂಗಮ್ಮ, ತಂಗಮ್ಮ, ರವಿ, ಗ್ರಾಮ ಪಂಚಾಯಿತಿ ಆಡಳಿತ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ಮಳೂರು ಗ್ರಾಮದ ಸಾವಿತ್ರಿ ಮಾತನಾಡಿ ನನ್ನ ಮನೆಗೆ ವಿದ್ಯುತ್ ಸಂಪರ್ಕವಿಲ್ಲ ಕೂಲಿ ಕೆಲಸ ಮಾಡಿ ಮನೆಗೆ ಬಂದಾಗ ತೊಂದರೆ ಯಾಗುತ್ತಿದೆ ಎಂದರು. ಪಡಿತರ ಚೀಟಿಯಲ್ಲಿ ನನ್ನ ಮಕ್ಕಳ ಹೆಸರನ್ನು ತೆಗೆದು ಹಾಕಲಾಗಿದೆ. ಆಹಾರ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಬಡವರಾದ ನಮಗೆ ಅನ್ನಭಾಗ್ಯ ಲಭಿಸುತ್ತಿಲ್ಲ, ಆಹಾರ ಇಲಾಖೆ ಅಧಿಕಾರಿಗೆ ಸಭೆಗೆ ಆಹ್ವಾನಿಸಿದರೂ ಬರಲಿಲ್ಲ ಎಂದು ಮಳೂರು ಗ್ರಾಮದ ಭರತ್ ತಮ್ಮ ನೋವು ತೋಡಿಕೊಂಡರು. ಗ್ರಾಮ ಪಂಚಾಯಿತಿ ಸದಸ್ಯ ವಸಂತಕುಮಾರ್ ಆಶ್ರಯ ಯೋಜನೆ ನಿರ್ಮಿಸಿದ ಮನೆ ಶಿಥಿಲಗೊಂಡಿದ್ದು ಇದರ ಬಗ್ಗೆ ಕ್ರಮ ಕೈಗೊಳ್ಳಲಾಗುವದು ಎಂದರು.
ಆಹಾರ ಇಲಾಖೆ ಅಧಿಕಾರಿಗೆ ಆಹ್ವಾನಿಸಿದರೂ ಸಭೆಗೆ ಬರಲಿಲ್ಲ ಅವರ ವಿರುದ್ಧ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಣಯ ಕೈಗೊಳ್ಳ ಲಾಯಿತು. ಹೇರೂರು ಸರಕಾರಿ ಶಾಲೆಯ ಕಟ್ಟಡ 1945 ರಲ್ಲಿ ನಿರ್ಮಿಸಿದ್ದು ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿ 1 ಕೊಠಡಿಗೆ ಬೀಗ ಹಾಕಲಾಗಿದೆ. ಶಾಲೆಯ ಕಟ್ಟಡದಿಂದ ಅನಾಹುತ ಆಗುವ ಮುನ್ನ ದುರಸ್ತಿ ಮಾಡಿಕೊಡಿ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಪ್ರಮೀಳ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗೆ ಲಿಖಿತ ಮನವಿ ನೀಡಿದರು ಇದಕ್ಕೆ ಉತ್ತರಿಸಿದ ತಾಲೂಕು ಪಂಚಾಯಿತಿ ಸದಸ್ಯೆ ಮಣಿ ನಮಗೆ ಅನುದಾನ ಕಡಿಮೆಯಿದ್ದು ತಡೆಗೋಡೆ ಅಂಗನವಾಡಿ ಶಾಲೆ ದುರಸ್ತಿಗೆ ಲಭ್ಯವಾದ ಅನುದಾನದಲ್ಲಿ ಹಣ ಮೀಸಲಿಟ್ಟಿದ್ದೇನೆ. ಎಲ್ಲವನ್ನು ಹಂತ ಹಂತವಾಗಿ ಮಾಡುತ್ತೇವೆ ಎಂದರು.
ಜನಪ್ರತಿನಿಧಿಗಳಿಗೆ ಕೆಲಸ ಮಾಡಲು ಬದ್ಧತೆ ಆಸಕ್ತಿ ಇರಬೇಕು ಸಮಸ್ಯೆ ಇದೆ ಎಂದು ಮಾಡುವ ಕೆಲಸ ಮಾಡದೆ ಇದ್ದರೆ ಹೇಗೆ? ನಮ್ಮೂರಿನ ರಸ್ತೆ, ಚರಂಡಿ ಪೂರ್ಣ ಹಾಳಾಗಿದೆ. ಯಾರಿಗೆ ಹೇಳುವದು ಎಂದು ಗ್ರಾಮದ ಪೊನ್ನಣ್ಣ ಅವರು ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಸದಸ್ಯೆ ಕುಮುಧಾ ಧರ್ಮಪ್ಪ ಅವರು ಉತ್ತರಿಸಿ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ 13 ಲಕ್ಷ ಅನುದಾನ ಸಿಗುತ್ತಿದ್ದು ಇದು ಸಾಕಾಗುವದಿಲ್ಲಾ ಹೆಚ್ಚಿನ ಅನುದಾನಕ್ಕೆ ಸಿ.ಎಂ. ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಲಾಗಿದೆ. ಪ್ರÀಕೃತಿ ವಿಕೋಪದಡಿ ರೂ. 1 ಕೋಟಿ 20 ಲಕ್ಷ ಜಿಲ್ಲಾ ಪಂಚಾಯಿತಿ ತನ್ನ ವ್ಯಾಪ್ತಿಗೆ ನೀಡಬೇಕು. ಅದರಲ್ಲಿ ಗ್ರಾಮದ ಮುಖ್ಯ ರಸ್ತೆ ಚರಂಡಿಗೆ ಹಣ ಒದಗಿಸಲಾಗುವದು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಹೇಶ ಮತ್ತು ಪಿಡಬ್ಲ್ಯುಡಿ ಮಂತ್ರಿ ರೇವಣ್ಣ ಅವರನ್ನು ಭೇಟಿಯಾಗಿ ಶಾಲೆ ರಸ್ತೆಗೆ ಹೆಚ್ಚಿನ ಅನುದಾನ ಬಿಡುಗಡೆ ಗೊಳಿಸಲು ಮನವಿ ನೀಡಿದ್ದೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಜಿನಿ ಮಾತನಾಡಿ ಊರಿನ ಅಭಿವೃದ್ಧಿ ಪಡಿಸುವದೇ ನಮ್ಮಗುರಿಯಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರಿಗೆ 1.5 ಲಕ್ಷ ಅನುದಾನ ಲಭ್ಯವಾಗುತ್ತಿದೆ. ಆದ್ಯತೆ ಮೇರೆ ಕೆಲಸ ಕಾಮಗಾರಿ ನಡೆಸಲಾಗುವದು. ನಮ್ಮ ಕೆಲಸಕ್ಕೆ ಗ್ರಾಮಸ್ಥರು ಕೈ ಜೋಡಿಸಬೇಕು ಕಾನ್ ಬೈಲು ಶಾಲೆಯ ಮೈದಾನದಲ್ಲಿ ಸಂಜೆ ವೇಳೆ ಗಾಂಜಾ ಮದ್ಯ ಸೇವಿಸುವ ಪುಂಡರು ಸೇರುತ್ತಿದ್ದಾರೆ. ಪೊಲೀಸರು ಸಮಾಜ ಘಾತುಕ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳ ಬೇಕೆಂದರು.
ವೇದಿಕೆಯಲ್ಲಿದ್ದ ವಿವಿಧ ಇಲಾಖೆ ಅಧಕಾರಿಗಳು ಸರಕಾರ ದಿಂದ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಶೋದ ಪಿಡಿಒ ನಂದೀಶ್ ಕುಮಾರ್ ನೋಡಲ್ ಅಧಿಕಾರಿ ಡಾ. ಹೆಚ್.ಎಸ್. ಆನಂದ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅಂಬೆಕಲ್ ಚಂದ್ರಶೇಖರ್, ಬಿಜು, ರಾಣಿ, ಸತೀಶ್, ಚೆನ್ನಮ್ಮ, ಸಿಬ್ಬಂದಿಗಳು ಹಾಜರಿದ್ದರು.