ನಾಚಪ್ಪ ವಿಶ್ವಾಸ

ಮಡಿಕೇರಿ, ಆ. 20: ಕೊಡಗಿನ ಮೂಲಭೂತ ಸಮಸ್ಯೆಗಳ ಪರಿಹಾರ ಮತ್ತು ಅತಿ ಸೂಕ್ಷ್ಮಾತಿ ಸೂಕ್ಷ್ಮ ಜನಾಂಗವಾದ ಕೊಡವರ ಹಿತರಕ್ಷಣೆಯ ಹಿನ್ನೆಲೆ ಕೊಡವ ಪ್ರದೇಶ ಸ್ವಾಯತ್ತತೆಯ ಕುರಿತಾದ ಕೊಡವ ನ್ಯಾಷನಲ್ ಕೌನ್ಸಿಲ್‍ನ ಹೋರಾಟಕ್ಕೆ ಪೂರಕವಾಗಿ, ಪ್ರಸಕ್ತ ಸಾಲಿನ ನವೆಂಬರ್‍ನಲ್ಲಿ ನಡೆಯುವ ರಾಜ್ಯಸಭೆಯಲ್ಲಿ ಚರ್ಚೆಗೆ ಬರಲಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಕೊಡವರ ಬೇಡಿಕೆಗಳಿಗೆ ಕಳೆದ ಸಾಲಿನ ಕೊಡವ ನ್ಯಾಷನಲ್ ಡೇಯಲ್ಲಿ ಪಾಲ್ಗೊಂಡಿದ್ದ ರಾಜ್ಯಸಭಾ ಸದಸ್ಯ ಡಾ. ಸುಬ್ರಮಣ್ಯನ್ ಸ್ವಾಮಿ ಸ್ಪಂದಿಸಿದ್ದರು. ಇದೀಗ ಇವರ ಮೂಲಕÀ ಮುಂದಿನ ನವೆಂಬರ್‍ನಲ್ಲಿ ನಡೆಯುವ ಲೋಕಸಭೆಯಲ್ಲಿ ಕೊಡವ ಪ್ರದೇಶ ಸ್ವಾಯತ್ತತೆ ಕುರಿತ ಮಸೂದೆ ಮಂಡನೆಯಾಗುವದ ರೊಂದಿಗೆ, ರಾಜ್ಯಸಭೆಯಲ್ಲಿ ಚರ್ಚೆಗೆ ಒಳಪಡಲಿದೆ. ಇದು ಸಿಎನ್‍ಸಿಯ ಅವಿಶ್ರಾಂತ ಹೋರಾಟದ ಫಲ ವಾಗಿದೆ ಎಂದು ಅಭಿಪ್ರಾಯಪಟ್ಟರು.

ಲೋಕಸಭೆಯಲ್ಲಿ ಮಸೂದೆ ಮಂಡನೆಯಾಗುವ ಮತ್ತು ರಾಜ್ಯಸಭೆಯಲ್ಲಿ ವಿಷಯ ಚರ್ಚೆಗೊಳಪಡುವ ವಿಚಾರವನ್ನು ಸ್ವತಃ ಡಾ. ಸುಬ್ರಮಣ್ಯನ್ ಸ್ವಾಮಿ ಅವರು ಟ್ವೀಟ್ ಮೂಲಕ ದೃಢಪಡಿಸಿದ್ದಾರೆ. ಬಿಜೆಪಿಯ ಉನ್ನತ ಮಟ್ಟದ ನಾಯಕತ್ವದಲ್ಲಿ ಕೊಡವ ಪ್ರದೇಶಕ್ಕೆ ಸ್ವಾಯತ್ತತೆ ಮತ್ತು ಆರ್ಥಿಕ ಸಬಲೀಕರಣಕ್ಕೆ ಸಂವಿಧಾನಿಕ ರಕ್ಷಣೆ ನೀಡಲು ಸಹಮತ ಹಾಗೂ ಒಮ್ಮತ ಮೂಡಿರುವ ಕುರಿತು ಆಶಾವಾದ ವನ್ನು ಡಾ. ಸುಬ್ರಮಣ್ಯನ್ ಸ್ವಾಮಿ ವ್ಯಕ್ತಪಡಿಸಿದ್ದಾರೆ ಎಂದು ನಾಚಪ್ಪ ತಿಳಿಸಿದರು.

ಗೋಷ್ಠಿಯಲ್ಲಿ ಪುಲ್ಲೇರ ಕಾಳಪ್ಪ, ಕಾಟುಮಣಿಯಂಡ ಉಮೇಶ್, ಕಿರಿಯಮಾಡ ಶರಿನ್ ಹಾಗೂ ಚಂಬಂಡ ಜನತ್ ಕುಮಾರ್ ಉಪಸ್ಥಿತರಿದ್ದರು.