ಕುಶಾಲನಗರ, ಆ. 20: ಕುಶಾಲನಗರ ಪಪಂ ವ್ಯಾಪ್ತಿಯಲ್ಲಿ ಸುಮಾರು 3 ಕಿ.ಮೀ. ವ್ಯಾಪ್ತಿಯಲ್ಲಿ ಒಟ್ಟು 300 ಮನೆಗಳು ಜಲಾವೃತ ವಾಗಿದ್ದು 700 ಕ್ಕೂ ಅಧಿಕ ಕುಟುಂಬಗಳು ಅತಂತ್ರ ಸ್ಥಿತಿ ಎದುರಿಸುತ್ತಿವೆ. ಪಟ್ಟಣದ 23 ಕಿ.ಮೀ. ವ್ಯಾಪ್ತಿಯಲ್ಲಿ ನದಿ ಕೆಸರು ತುಂಬಿ ಹೋಗಿದ್ದು ದಿನನಿತ್ಯ ಯುದ್ದೋಪಾದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಕಾವೇರಿ ತುಂಬಿ ಹರಿಯುತ್ತಿದ್ದ ಸಂದರ್ಭ ಹಾರಂಗಿ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಅಧಿಕಗೊಂಡ ಬೆನ್ನಲ್ಲೇ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ಪ್ರಮಾಣದ ನೀರು ಹೊರಬಿಟ್ಟ ಹಿನೆÀ್ನಲೆಯಲ್ಲಿ ಕಾವೇರಿ ನದಿ ತಟದ ಮನೆಗಳು ಜಲಾವೃತಗೊಂಡಿವೆ. ಈ ಸಂದರ್ಭ ಸುಮಾರು 20 ವಾಹನಗಳು ನೀರಿನಲ್ಲಿ ಸಿಲುಕಿಕೊಂಡಿದ್ದು ದುರಸ್ಥಿಗೊಳಗಾಗಿದೆ. ಪಪಂ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಹೊಳೆ ಬದಿಯಲ್ಲಿ ಸಂಪೂರ್ಣ ಕಸ ತ್ಯಾಜ್ಯಗಳು ಸೇರಿದ್ದು ಇದನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯಬೇಕಾಗಿದೆ. (ಮೊದಲ ಪುಟದಿಂದ) ನದಿ ತಟದಲ್ಲಿರುವ ಪಿಟ್‍ಗಳನ್ನು ಸರಿಪಡಿಸಿಸಬೇಕಾಗಿದೆ, ಮನೆಗಳಲ್ಲಿ ತುಂಬಿದ ನೀರಿನಿಂದ ಒದ್ದೆಯಾಗಿ ನಿರುಪಯುಕ್ತವಾಗಿರುವ ವಸ್ತುಗಳನ್ನು ಸಾಗಿಸಬೇಕಾಗಿದೆ. ಕುಡಿವ ನೀರಿನ ಪೈಪ್‍ಗಳು ಒಡೆದುಹೋಗಿದ್ದು ಸರಿಪಡಿಸುವ ಕಾರ್ಯ ನಡೆಯಬೇಕಿದೆ. ಚರಂಡಿಗಳು ಪ್ಲಾಸ್ಟಿಕ್ ತ್ಯಾಜ್ಯಗಳಿಂದ ತುಂಬಿದ್ದು ಸ್ವಚ್ಛ ಗೊಳಿಸುವದು ಈ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಸಿದ್ದಗೊಳ್ಳುತ್ತಿದ್ದು ಅಂದಾಜು 300 ಪೌರಕಾರ್ಮಿಕರ ಅವಶ್ಯಕತೆಯಿದೆ ಎಂದು ಪಪಂ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಮುಳ್ಳುಸೋಗೆ ಗ್ರಾಪಂ ವ್ಯಾಪ್ತಿಯ 140 ಮನೆಗಳು ಜಲಾವೃತಗೊಂಡಿವೆ. ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯಲ್ಲಿ 43 ಮನೆಗಳು ಜಲಾವೃತಗೊಂಡ ಬಗ್ಗೆ ವರದಿಯಾಗಿದೆ. ಮನೆಗಳನ್ನು ಸ್ವಚ್ಛಗೊಳಿಸಲು ಟ್ಯಾಂಕರ್ ಮೂಲಕ ನೀರು ಒದಗಿಸುವದು ಹಾಗೂ ಹೆಚ್ಚುವರಿ ಪೌರಕಾರ್ಮಿಕರ ಅವಶ್ಯಕತೆಯಿರುವದಾಗಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೂಡಿಗೆ ಗ್ರಾಪಂ ವ್ಯಾಪ್ತಿಯಲ್ಲಿ 65 ಮನೆಗಳು ಜಲಾವೃತಗೊಂಡಿವೆ. ಸ್ವಚ್ಛತಾ ಕಾರ್ಯಕ್ಕೆ 3 ಸಕ್ಕಿಂಗ್ ಮೆಷಿನ್‍ಗಳು, 2 ಜೆಸಿಬಿ ಯಂತ್ರಗಳು, ಮೋಟಾರ್ ಪಂಪ್‍ಗಳು, ಎರಡು ಟನ್ ಬ್ಲೀಚಿಂಗ್ ಪೌಡರ್, 3 ಬ್ಯಾರೆಲ್ ಫಿನಾಯಿಲ್ ಮತ್ತಿತರ ಸಲಕರಣೆಗಳು ಅವಶ್ಯಕv Éಯಿದೆ ಎಂದು ಕ್ರಿಯಾಯೋಜನೆಯಲ್ಲಿ ತಿಳಿಸಲಾಗಿದ್ದು, ಖಾಸಗಿ ಮನೆಗಳ ಮಾಲೀಕರಿಗೆ ಹಾಗೂ ನಿವಾಸಿಗಳಿಗೆ ಕನಿಷ್ಟ 3 ಕೋಟಿ ರೂ.ಗಳ ನಷ್ಟ ಉಂಟಾಗಿರುವ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.

ಇದರೊಂದಿಗೆ ಚರಂಡಿ, ರಸ್ತೆ ಮತ್ತಿತರ ಸೌಕರ್ಯಗಳು ಸಂಪೂರ್ಣ ನಾಶಗೊಂಡಿದ್ದು ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ 10 ಕೋಟಿ ರೂ.ಗಳ ವಿಶೇಷ ಅನುದಾನಕ್ಕೆ ಪ.ಪಂ. ಮೂಲಕ ಪ್ರಸ್ತಾವನೆ ಕಳುಹಿಸಲಾಗಿದೆ.

ಕುಶಾಲನಗರದ ನೆರೆಯ ಗ್ರಾಮವಾದ ಮೈಸೂರು ಜಿಲ್ಲೆಯ ಕೊಪ್ಪ ಗ್ರಾಮದ 50 ಕ್ಕೂ ಅಧಿಕ ಮನೆಗಳು ಕಾವೇರಿ ಹಿನ್ನೀರಿನಿಂದ ಮುಳುಗಡೆಯಾಗಿದ್ದು ಈ ವ್ಯಾಪ್ತಿಯ ಪ್ರದೇಶದ ಮನೆಗಳ ಸ್ವಚ್ಛತಾ ಕಾರ್ಯವನ್ನು ಕುಶಾಲನಗರ ಪಪಂ ಮೂಲಕ ಕೈಗೆತ್ತಿಕೊಳ್ಳುವಂತೆ ಕುಶಾಲನಗರದಲ್ಲಿ ನಡೆದ ಸಂತ್ರಸ್ತರ ಸಭೆಯಲ್ಲಿ ಉನ್ನತ ಅಧಿಕಾರಿಗಳು ನಿರ್ಣಯ ಕೈಗೊಂಡಿದ್ದು ಸಧ್ಯದಲ್ಲಿಯೇ ಕುಶಾಲನಗರದ ಸ್ವಚ್ಛತಾ ಕಾರ್ಯದೊಂದಿಗೆ ಕೊಪ್ಪ ಗ್ರಾಮದ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗುವದು.