ಮಡಿಕೇರಿ, ಆ. 20: ಕೊಡಗು ಜಿಲ್ಲೆಯ ಜನರೇ ವಿಶಿಷ್ಟ ರೀತಿಯವರು... ಪ್ರಾಕೃತಿಕವಾಗಿ, ಭೌಗೋಳಿಕವಾಗಿ, ಸಾಂಸ್ಕøತಿಕ ವಾಗಿಯೂ ಇಲ್ಲಿನ ಜನತೆ ವಿಭಿನ್ನ. ಪ್ರಕೃತಿಯನ್ನು ಪೂಜಿಸುವವರು, ಗೌರವಿಸುವವರು ಆರಾಧಿಸುವವರು ಇರುವ ರಾಜ್ಯದ ಈ ಪುಟ್ಟ ಜಿಲ್ಲೆ ಪ್ರಸಕ್ತ ವರ್ಷ ಕಲ್ಪನೆಗೂ ನಿಲುಕದಂತೆ ನಲುಗಿ ಹೋಗಿದೆ. ಗಿಡ ಮರಗಳನ್ನು ಜಲವನ್ನು ದೇವರ ಸ್ವರೂಪದಲ್ಲಿ ಕಂಡು ವಾಯು-ವರುಣ-ಜಲವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಪೂಜಿಸಿ ಕೊಂಡು ಬರುತ್ತಿದ್ದ ಈ ನಾಡಿನ ಜನರು ತಾವು ಆರಾಧಿಸಿ ಕೊಂಡು ಬರುತ್ತಿದ್ದ ಪ್ರಕೃತಿಯ ಮುನಿಸ್ಸಿನಿಂದಲೇ ಜರ್ಜರಿತವಾದ ದುರಂತ ಎಲ್ಲರನ್ನೂ ಧೃತಿಗೆಡುವಂತೆ ಮಾಡಿದೆ.
ದೇಶ ರಕ್ಷಣೆಗೆ ಅದೆಷ್ಟೋ ವೀರ ಸೇನಾನಿಗಳನ್ನು ನೀಡುವ ಮೂಲಕ ಸೈನಿಕರ ನಾಡು ಎಂಬ ಖ್ಯಾತಿಗೂ ಒಳಗಾಗಿರುವ ಈ ಮಣ್ಣಿನಲ್ಲಿ ದೇಶದ ಇತರೆಡೆಗಳಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸಿದ ಸಂದರ್ಭದಲ್ಲಿ ಅಲ್ಲಿನ ಜನತೆಯ ರಕ್ಷಣೆಗೆ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿರುವ ಸೈನಿಕರ ಎದೆಯನ್ನೇ ಝಲ್ಲೆನಿಸುವಂತೆ ಮಾಡಿದ 2018ರ ಈ ಮಳೆಗಾಲ ಕೊಡಗಿನ ಜನತೆ ಇಲ್ಲಿಯ ತನಕ ಕಂಡರಿಯದ್ದು, ಕೇಳರಿಯದ್ದು. ಹಲವೆಡೆಗಳಲ್ಲಿ ನಡೆದು ಹೋಗಿರುವ ಈ ದುರಂತ ಮರೆಯಲಾಗದ ಘಟನೆಯಂತಾಗಿದೆ.
ಸೇನಾ ಜಿಲ್ಲೆ ಖ್ಯಾತಿಯ ಜಿಲ್ಲೆಗೇ ದೇಶದ ರಕ್ಷಣಾ ಪಡೆಯ ಸಿಬ್ಬಂದಿಗಳು, ರಕ್ಷಣೆಗಾಗಿ ಆಗಮಿಸಬೇಕಾದ ಪರಿಸ್ಥಿತಿ. ಹೆಲಿಕಾಫ್ಟರ್ ಮೂಲಕ ಜನರ ಪ್ರಾಣ ರಕ್ಷಣೆಯ ಪ್ರಯತ್ನದ ಅನಿವಾರ್ಯತೆ. ಅದೆಷ್ಟೋ ಗ್ರಾಮಗಳನ್ನು ನಕ್ಷೆಗಳಲ್ಲಿ ಮಾತ್ರ ಗುರುತಿಸುವಂತಹ ಕರಾಳತೆ. ಮುಗಿಲೆತ್ತರದ ಬೆಟ್ಟ ಗುಡ್ಡಗಳು ಧರಾಶಾಹಿಯಾಗಿ ಪಾತಾಳದ ಮಟ್ಟಕ್ಕೆ ಇಳಿದಿರುವದು ಈ ಮಣ್ಣಿನಡಿಯಲ್ಲಿ ಸಿಲುಕಿಕೊಂಡ ಮನೆ-ಮಠಗಳು ಮಾತ್ರವಲ್ಲ ಅಮೂಲ್ಯ ಜೀವಗಳು ಮೇಘ ಸ್ಫೋಟ-ಜಲಸ್ಫೋಟ ದಿಂದಾಗಿ ಇನ್ನೂ ನಿಖರವಾಗಿ ಏನೆಲ್ಲಾ ಧಾರುಣ ಘಟನೆಗಳು ಘಟಿಸಿ ಹೋಗಿವೆ ಎಂದು ತಿಳಿಯದ ಸನ್ನಿವೇಶ... ನಿಖರ ಮಾಹಿತಿ ಅರಿಯಲು ಇನ್ನೆಷ್ಟು ದಿನಗಳು ಬೇಕಾಗಬಹುದು ಎಂದು ಈಗಲೇ ಹೇಳಲು ಸಾಧ್ಯವಿಲ್ಲದಂತಾಗಿರುವದು... ಅದರಲ್ಲೂ ಈ ಎಲ್ಲಾ ದುರ್ಘಟನೆಗಳು ನಡೆದು ಹೋಗಿರುವದು ಕೆಲವೇ ದಿನಗಳಲ್ಲಿ ಎಂಬದು ಇದು ಕನಸೋ... ನನಸೋ... ಎಂಬಂತಾಗಿರುವದು ವಿಪರ್ಯಾಸವಾಗಿದೆ.
ಕೊಡಗು ಒಂದು ರೀತಿಯಲ್ಲಿ ಸ್ವಾಭಿಮಾನಿಗಳ ಜಿಲ್ಲೆ. ಇಲ್ಲಿನ ಜನರು ಎಲ್ಲದಕ್ಕೂ ಸರಕಾರದ ಸೌಲಭ್ಯ-ಯೋಜನೆಗಳನ್ನು ಕಾಯುವವರಲ್ಲ. ಬದಲಿಗೆ ಹಲವಷ್ಟು ಮಂದಿಗೆ ತಾವೇ ಸೌಲಭ್ಯ-ಕೆಲಸಗಳನ್ನು ನೀಡುತ್ತಿದ್ದ ಜಾಯಮಾನದವರು. ಇತರೆಡೆಗಳಲ್ಲಿ ಪ್ರಾಕೃತಿಕ ದುರಂತಗಳು ಸಂಭವಿಸಿದಾಗ ನಾಮುಂದು... ತಾಮುಂದು ಎಂದು ನೆರವಿನ ಹಸ್ತ ನೀಡುತ್ತಿದ್ದವರು... ಆದರೆ ಇಂದು ಅದೇನಾಗಿ ಹೋಗಿದೆ... ಈ ರೀತಿಯ ಸಹೃದಯದವರೆಲ್ಲರೂ ಉಟ್ಟ ಬಟ್ಟೆಯಲ್ಲಿ ಬೀದಿ ಪಾಲಾಗಿದ್ದಾರೆ. ಗ್ರಾಮಕ್ಕೆ ಗ್ರಾಮಗಳೇ ನಾಮಾವಶೇಷ ವಾಗಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ತೋಟಗಳಲ್ಲಿ ಕೆಲಸ ನೀಡುತ್ತಿದ್ದವರು ತಾವೇ... ಇನ್ನೊಬ್ಬರ ಸಹಾಯಕ್ಕಾಗಿ
ನಡೆದು ಹೋಗಿರುವದು ಕೆಲವೇ ದಿನಗಳಲ್ಲಿ ಎಂಬದು ಇದು ಕನಸೋ... ನನಸೋ... ಎಂಬಂತಾಗಿರುವದು ವಿಪರ್ಯಾಸವಾಗಿದೆ.
ಕೊಡಗು ಒಂದು ರೀತಿಯಲ್ಲಿ ಸ್ವಾಭಿಮಾನಿಗಳ ಜಿಲ್ಲೆ. ಇಲ್ಲಿನ ಜನರು ಎಲ್ಲದಕ್ಕೂ ಸರಕಾರದ ಸೌಲಭ್ಯ-ಯೋಜನೆಗಳನ್ನು ಕಾಯುವವರಲ್ಲ. ಬದಲಿಗೆ ಹಲವಷ್ಟು ಮಂದಿಗೆ ತಾವೇ ಸೌಲಭ್ಯ-ಕೆಲಸಗಳನ್ನು ನೀಡುತ್ತಿದ್ದ ಜಾಯಮಾನದವರು. ಇತರೆಡೆಗಳಲ್ಲಿ ಪ್ರಾಕೃತಿಕ ದುರಂತಗಳು ಸಂಭವಿಸಿದಾಗ ನಾಮುಂದು... ತಾಮುಂದು ಎಂದು ನೆರವಿನ ಹಸ್ತ ನೀಡುತ್ತಿದ್ದವರು... ಆದರೆ ಇಂದು ಅದೇನಾಗಿ ಹೋಗಿದೆ... ಈ ರೀತಿಯ ಸಹೃದಯದವರೆಲ್ಲರೂ ಉಟ್ಟ ಬಟ್ಟೆಯಲ್ಲಿ ಬೀದಿ ಪಾಲಾಗಿದ್ದಾರೆ. ಗ್ರಾಮಕ್ಕೆ ಗ್ರಾಮಗಳೇ ನಾಮಾವಶೇಷ ವಾಗಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ತೋಟಗಳಲ್ಲಿ ಕೆಲಸ ನೀಡುತ್ತಿದ್ದವರು ತಾವೇ... ಇನ್ನೊಬ್ಬರ ಸಹಾಯಕ್ಕಾಗಿ ದಂತಹ ಒಂದು ಸನ್ನಿವೇಶ ಸಂದಿಗ್ಧತೆಯಂತಾಗಿದೆ. ಆದರೂ ಇಂತಹ ಒಂದು ಅನಿವಾರ್ಯತೆ ಕೊಡಗಿನ ಮಂದಿಗೆ ಎದುರಾಗಿರು ವದನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಇಂದಿನದ್ದಾಗಿದೆ.
ಪರಿಹಾರ ಕೇಂದ್ರಗಳು: ಹಲವಷ್ಟು ಶಾಲೆಗಳು, ಸಮುದಾಯಭವನಗಳು, ವಿವಿಧ ಸಮಾಜದ ಕಟ್ಟಡಗಳು ಇದೀಗ ಪರಿಹಾರ ಕೇಂದ್ರಗಳಾಗಿವೆ.
ನಿರಂತರ ಪ್ರಯತ್ನ: ಭೂಕುಸಿತ, ರಸ್ತೆ ಕುಸಿತ... ಜಲಾವೃತವಾದ ರಸ್ತೆ-ಸೇತುವೆಗಳು, ಕಟ್ಟಡಗಳಿಗೆ ಹಾನಿ ಯಿಂದ ವ್ಯಾಪಕ ಕಷ್ಟ-ನಷ್ಟದೊಂದಿಗೆ ಕೆಲವು ದಿನಗಳು ಜಿಲ್ಲೆಯ ಈ ಭಾಗಗಳಲ್ಲಿ ದಿಗ್ಬಂಧನದ ಪರಿಸ್ಥಿತಿ ಯನ್ನು ತಂದೊಡ್ಡಿತ್ತು. ಮುಖ್ಯ ಮಂತ್ರಿಯಾದಿಗೆ ಜನಪ್ರತಿನಿಧಿಗಳು, ಉನ್ನತಾಧಿಕಾರಿಗಳ ತಂಡ ತಂಡೋಪ ತಂಡವಾಗಿ ಆಗಮಿಸಿವೆ. ಮುಖ್ಯವಾಗಿ ಸೇನಾ ಸಿಬ್ಬಂದಿಗಳು, ಜಿಲ್ಲಾಡಳಿತ ಪೊಲೀಸ್, ಅಗ್ನಿಶಾಮಕದಳ... ಸೆಸ್ಕ್... ಸೇರಿದಂತೆ ಇತರ ಅಧಿಕಾರಿಗಳು ವಿಕೋಪವನ್ನು ಎದುರಿಸಲು ಪರಿಸ್ಥಿತಿ ನಿಭಾಯಿಸಲು ನಿರಂತರ ಪ್ರಯತ್ನದಲ್ಲಿವೆ.
ಸಂಘ-ಸಂಸ್ಥೆಗಳ ಪ್ರಯತ್ನ
ಸಂತ್ರಸ್ತರಿಗೆ ಸ್ಪಂದಿಸಲು-ಉಪಚರಿಸಲು ವಿವಿಧ ಸಂಘ-ಸಂಸ್ಥೆ, ಸಮಾಜದ ಪ್ರಮುಖರು ಕೂಡ ನಿರಂತರ ಪ್ರಯತ್ನದಲ್ಲಿದ್ದಾರೆ. ಬಹುತೇಕ ಚಟುವಟಿಕೆಗಳನ್ನು ಬದಿಗೊತ್ತಿ ನೊಂದವರ ಕಣ್ಣೀರೊರೆಸಲು ಈ ಮಂದಿ ಶ್ರಮಿಸುತ್ತಿದ್ದಾರೆ.
ಭಾರೀ... ಅನಾಹುತಗಳು ಎಲ್ಲೆಲ್ಲಿ...?
ಕೊಡಗು ಕಂಡು-ಕೇಳರಿಯದ ಮಾದರಿಯಲ್ಲಿ ನಡೆದಿರುವ ಈ ದುರಂತ ಪ್ರಸಂಗ ನಡೆದಿರುವ ಪ್ರಮುಖ ಸ್ಥಳಗಳು.. ಕೆಲವೆಡೆ ಬೆಟ್ಟ ಜರಿತ... ಇನ್ನು ಹಲವೆಡೆ ಜಲದ ಸೆಳೆತ ಹಾಗೂ ಮಣ್ಣು ಆವೃತವಾಗಿ ಕಷ್ಟ-ನಷ್ಟಗಳು ಸಂಭವಿಸಿವೆ. ಕಾಲೂರು, ದೇವಸ್ತೂರು, ಹಮ್ಮಿಯಾಲ, ಮುಟ್ಲು, ಹೆಬ್ಬೆಟ್ಟಗೇರಿ, ಗಾಳಿಬೀಡು, ವಣಚಲು, ಮಕ್ಕಂದೂರು, ಎಮ್ಮೆತಾಳು, ಮೇಘತಾಳು, ಇಗ್ಗೋಡ್ಲು, ಹಾಲೇರಿ, ಕಾಂಡನಕೊಲ್ಲಿ, ಹಟ್ಟಿಹೊಳೆ, ಮುಕ್ಕೋಡ್ಲು, ತಾಳತ್ಮನೆ, ಕಾಟಕೇರಿ, ಮದೆನಾಡು, 2ನೇ ಮೊಣ್ಣಂಗೇರಿ, ಜೋಡುಪಾಲ, ಬೆಟ್ಟತ್ತೂರು, ಮಡಿಕೇರಿ ನಗರದ ಕೆಲವು ಪ್ರದೇಶಗಳಾದ ಚಾಮುಂಡೇಶ್ವರಿನಗರ, ಇಂದಿರಾನಗರ, ಮಂಗಳಾದೇವಿನಗರ, ಜ್ಯೋತಿನಗರ, ರಾಜೇಶ್ವರಿನಗರ, ಸುಬ್ರಹ್ಮಣ್ಯನಗರ, ಭಗವತಿನಗರ ಸೇರಿದಂತೆ ಮಂಕ್ಯ, ಕಿಕ್ಕರಳ್ಳಿ, ಗರ್ವಾಲೆ, ಸೂರ್ಲಬ್ಬಿ, ಕುಂಬಾರಗಡಿಗೆ ಗ್ರಾಮ ಗಳು, ಮಾದಾಪುರ, ಮೂವತ್ತೊಕ್ಲು, ಶಿರಂಗಳ್ಳಿ, ಗರ್ವಾಲೆ, ಕಿರಗಂದೂರು, ತಾಕೇರಿ, ಹರಗ, ಬೆಟ್ಟದಳ್ಳಿ, ಕುಶಾಲನಗರದ ಸಾಯಿಬಡಾವಣೆ, ಕಾವೇರಿ ಬಡಾವಣೆ.
-ಶಶಿ ಸೋಮಯ್ಯ