ಮಡಿಕೇರಿ, ಆ. 20 : ಮಹಾಮಳೆಯಿಂದ ಕೊಡಗು ಜಿಲ್ಲೆಯ ಹಲವು ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿದ್ದು, ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ಬಾಳುಗೋಡು ಕೊಡವ ಸಮಾಜಗಳ ಒಕ್ಕೂಟ ಬ್ಯಾಂಕ್ ಖಾತೆಯೊಂದನ್ನು ತೆರೆದಿದೆ. ಆರ್ಥಿಕ ನೆರವು ನೀಡುವವರು ಈ ಬ್ಯಾಂಕ್ ಖಾತೆಗೆ ಹಣವನ್ನು ಸಂದಾಯ ಮಾಡುವಂತೆ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಮನವಿ ಮಾಡಿದ್ದಾರೆ. ಈಗಾಗಲೆ ಈ ಖಾತೆಯಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ 5 ಲಕ್ಷ ರೂ. ಸಂಗ್ರಹವಾಗಿದೆ. ಮತ್ತಷ್ಟು ದಾನಿಗಳು ಈ ಖಾತೆಗೆ ಆರ್ಥಿಕ ನೆರವನ್ನು ಒದಗಿಸುವ ಮೂಲಕ ಸಂತ್ರಸ್ತರಿಗೆ ನೆರವಿನ ಹಸ್ತ ನೀಡಬೇಕೆಂದು ಮನವಿ ಮಾಡಿರುವ ಅವರು, ಸಂಗ್ರಹವಾದ ಹಣವನ್ನು 2 ತಿಂಗಳ ನಂತರ ಸಂತ್ರಸ್ತರಿಗೆ ವಿತರಿಸಲಾಗುವದೆಂದು ತಿಳಿಸಿದ್ದಾರೆ.

ಧನ ಸಹಾಯಕ್ಕೆ ಕೆಡಿಸಿಸಿ ಬ್ಯಾಂಕ್, ವೀರಾಜಪೇಟೆ. ಕೊಡಗು ಫ್ಲಡ್ ರಿಲೀಫ್ ಫಂಡ್, ಖಾತೆ ಸಂಖ್ಯೆ: 121002108510 ಐಎಫ್‍ಎಸ್‍ಸಿ ಕೋಡ್: ಕೆಎಸ್‍ಸಿಬಿ0011001, ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ, ಕಚೆÉೀರಿ -08274-298061, ಮೊ.8453253256, 9449765382.