ವೀರಾಜಪೇಟೆ, ಆ. 15: ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರುದ್ರಗುಪ್ಪೆ ಗ್ರಾಮದ ಕೊಂಗಂಡ ಸುಬ್ರಮಣಿ ಅವರ ಗದ್ದೆಯಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗದ್ದೆಯ ಮಾಲೀಕ ಸುಬ್ರಮಣಿ ಅವರು ಇಂದು ಬೆಳಿಗ್ಗೆ ಗದ್ದೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿಯೋರ್ವರ ಮೃತದೇಹ ಬಿದ್ದಿರುವದು ಗೋಚರಿಸಿದೆ. ವಿಪರೀತ ಮಳೆ ಇದ್ದ ಕಾರಣ ಗದ್ದೆಯಲ್ಲಿ ನೀರು ತುಂಬಿದ್ದು ಕಾಲು ಜಾರಿ ಬಿದ್ದು ಮೃತ ಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ವೀರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಸುರೇಶ್ ಬೋಪಣ್ಣ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕ್ಯಗೊಂಡಿದ್ದಾರೆ.