ಇದು ಮಡಿಕೇರಿ ಕೋಟೆ ಆವರಣ. ಇಲ್ಲಿ ಇಂದು ಸ್ವಾತಂತ್ರ್ಯೋತ್ಸವದ ಸಂಭ್ರಮ, ಅತಿಥಿಗಳಿಗಾಗಿ ಶಾಮಿಯಾನದ ವ್ಯವಸ್ಥೆ ಮಾಡಲಾಗಿದೆ. ಎದುರಿನ ಮೈದಾನದಲ್ಲಿ ಪಥ ಸಂಚಲನ ನಡೆಯಬೇಕು. ಅರ್ಧ ಅಡಿಗೂ ಹೆಚ್ಚು ಎತ್ತರಕ್ಕೆ ನೀರು ನಿಂತಿದೆ. ಮಕ್ಕಳಿಂದ ಇಲ್ಲಿ ಪಥ ಸಂಚಲನ ಹೇಗೆ ಎಂಬ ಪ್ರಶ್ನೆಗೆ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಉತ್ತರಿಸಿ 8ನೇ ತರಗತಿವರೆಗಿನ ಮಕ್ಕಳು ಪಾಲ್ಗೊಳ್ಳುವ ಅವಶ್ಯಕತೆಯಿಲ್ಲ. ದೇಶದ ಹಬ್ಬಕ್ಕಾಗಿ ಇತರರ ಹಾಜರಾತಿ ಕಡ್ಡಾಯ ಎಂದಿದ್ದಾರೆ. ಕೊನೇ ಕ್ಷಣದ ಬದಲಾವಣೆ ಬಗ್ಗೆಯೂ ಸುಳಿವು ನೀಡಿದ್ದಾರೆ.ಯಾರಿಗೂ ತೊಂದರೆ ಆಗದಿರಲಿ ಎಂದು ಪ್ರಕೃತಿ ಮಾತೆಯನ್ನು ಪ್ರಾರ್ಥಿಸೋಣ!