ಕೂಡಿಗೆ, ಆ. 15 : ದೇಶ ವಿಭಜನೆಯ ಅಂಗೀಕಾರವಾದ ಸಂದರ್ಭದಲ್ಲಿ ತಮ್ಮತನವನ್ನು ಉಳಿಸಿಕೊಳ್ಳುವದಕ್ಕಾಗಿ ಈ ದೇಶದ ಯೋಧರು ಯಾವ ಕಷ್ಟ ನಷ್ಟಗಳಿಗೂ ಹೆದರದೆ ಹೋರಾಟದಲ್ಲಿ ತೊಡಗಿದ ಪರಿಣಾಮ ನಮಗೆ ಅರ್ಧ ಪ್ರಮಾಣದ ಸ್ವಾತಂತ್ರ್ಯ ಮಾತ್ರ ದಕ್ಕಿದೆ. ಇನ್ನುಳಿದ ಅರ್ಧ ಸ್ವಾತಂತ್ರ್ಯವನ್ನು ಗಳಿಸಿ ಭವ್ಯ ಭಾರತ ನಿರ್ಮಾಣ ಮಾಡಬೇಕಾದರೆ ದೇಶದ ಯುವ ಪಡೆ ಪಣತೊಟ್ಟು ನಿಲ್ಲಬೇಕು ಎಂದು ಕೇಂದ್ರ ಕೌಶಲ್ಯಾ ಭಿವೃದ್ಧಿ ಸಚಿವ ಅನಂತ್‍ಕುಮಾರ್ ಹೆಗ್ಡೆ ಹೇಳಿದರು.

ಕುಶಾಲನಗರ ಹಿಂದೂ ಜಾಗರಣ ವೇದಿಕೆಯು ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಕೂಡಿಗೆಯಲ್ಲಿ ಆಯೋಜಿಸಿದ್ದ ಬೃಹತ್ ಪಂಜಿನ ಮೆರವಣಿಗೆಯ ನಂತರ ನಡೆದ ಸಭಾ ಕಾರ್ಯ ಕ್ರಮವನ್ನುದ್ದೇಶಿಸಿ ಮಾತನಾಡಿ ಜಗತ್ತಿನ ಯಾವದೇ ರಾಷ್ಟ್ರದ ಪ್ರಜೆ ಬಂದರೂ ಆಶ್ರಯ ನೀಡುವ ದೇಶ ಭಾರತ.