ವೀರಾಜಪೇಟೆ, ಆ. 15: ವೀರಾಜಪೇಟೆ ವಿಭಾಗದಲ್ಲಿ ನಿನ್ನೆ ಬೆಳಗಿನಿಂದಲೇ ಮೋಡ ಕವಿದ ವಾತಾವರಣದೊಂದಿಗೆ ಭಾರೀ ಮಳೆಯಾಗುತ್ತಿದ್ದು, ಇಂದು ಬೆಳಗಿನ 9 ಗಂಟೆಗೆ ಸೇತುವೆ ಮೇಲೆ ನೀರು ಹರಿಯುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವೀರಾಜಪೇಟೆ ಮಡಿಕೇರಿಯ ನೇರ ರಸ್ತೆ ಸಂಪರ್ಕವನ್ನು ಎರಡು ಗಂಟೆಗಳ ಕಾಲ ಬಂದ್ ಮಾಡಿದ್ದರಿಂದ ಮಡಿಕೇರಿಗೆ ಹೋಗುವ ಹಾಗೂ ಅಲ್ಲಿಂದ ಬರುವ ವಾಹನಗಳು ಕೊಂಡಂಗೇರಿಯ ಬಳಸು ಮಾರ್ಗದಲ್ಲಿ ಸಂಚರಿಸ ಬೇಕಾಯಿತೆಂದು ತಾಲೂಕು ತºಶೀಲ್ದಾರ್ ಗೋವಿಂದರಾಜು ತಿಳಿಸಿದ್ದಾರೆ.

ಬೆಳಿಗ್ಗೆ 11ಗಂಟೆಯಿಂದ ಮಳೆ ಕಡಿಮೆಯಾದ ಹಿನೆÀ್ನಲೆಯಲ್ಲಿ ರಸ್ತೆಯ ನೀರು ಇಳಿಮುಖಗೊಂಡುದರಿಂದ ಈ ರಸ್ತೆಯಲ್ಲಿ ವಾಹನಗಳು ಸಂಚರಿಸಿದವು. ಈಗ ಸೇತುವೆ ತುಂಬಲು ಇನ್ನು ಅರ್ಧ ಅಡಿಯಷ್ಟು ಮಾತ್ರ ಬಾಕಿ ಇರುವದಾಗಿ ಈ ವಿಭಾಗದ ರೆವಿನ್ಯೂ ಸಿಬ್ಬಂದಿಗಳು ಸಂಜೆ ಆರು ಗಂಟೆಗೆ ತಾಲೂಕು ಕಚೇರಿಗೆ ವರದಿ ಮಾಡಿದ್ದಾರೆ.

ಇಲ್ಲಿನ ಕಾವೇರಿ ಕಲ್ಯಾಣ ಮಂಟಪದ ಬಳಿ ಬರೆ ಕುಸಿದಿದೆ. ಯಾವದೇ ಪ್ರಾಣ ಹಾನಿ ಸಂಭವಿಸಿಲ್ಲ.

ಅರಸುನಗರ, ಮಲೆತಿರಿಕೆ ಬೆಟ್ಟ ಹಾಗೂ ನೆಹರೂನಗರದ ಬೆಟ್ಟದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ನಿವಾಸಿಗಳು ಭಯಭೀತಗೊಂಡಿದ್ದು ಜನಜೀವನವು ಅಸ್ಯವ್ಯಸ್ತಗೊಳ್ಳುವ ಪರಿಸ್ಥಿತಿಗೆ ತಲಪಿದೆ.