ಕೂಡಿಗೆ, ಆ. 14: ಇಲ್ಲಿಗೆ ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯ ಅಣೆಕಟ್ಟೆಯ ಆವರಣದಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಇಂಧ್ರ ಧನುಷ್ ಕಾರ್ಯಕ್ರಮ ನಡೆಯಿತು.

ಉದ್ಘಾಟನೆಯನ್ನು ಕೂಡುಮಂಗಳೂರು ಗ್ತಾಮ ಪಂಚಾಯಿತಿ ಸದಸ್ಯೆ ಪಾರ್ವತಿ ರಾಮೇಗೌಡ ನೆರವೇರಿಸಿದರು. ಆರೋಗ್ಯ ಇಲಾಖೆಯ ಮಾಹಿತಿಗಳನ್ನು ಮಹಿಳೆಯರು ಪಡೆದುಕೊಂಡು ತಮ್ಮ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಬೇಕು ಎಂದರು. ಮುಖ್ಯ ಅತಿಥಿಯಾದ ಗ್ರಾಮ ಪಂಚಾಯಿತಿ ಸದಸ್ಯೆ ಜ್ಯೋತಿ ಪ್ರಮೀಳಾ ಮಾತನಾಡಿ, ಜಂತುಹುಳು, ಎದೆಹಾಲಿನ ಮಹತ್ವವನ್ನು ಆರೋಗ್ಯ ಇಲಾಖೆಯವರು ತಿಳಿಸುತ್ತಿರುವದನ್ನು ಪಾಲಿಸಬೇಕು ಎಂದರು.

ಈ ಸಂದರ್ಭ ಆರೋಗ್ಯ ಇಲಾಖೆಯ ಸಹಾಯಕಿ ಶಾಂತಕುಮಾರಿ, ಅಂಗನವಾಡಿ ಕಾರ್ಯಕರ್ತೆ ಪೂಮಚ್ಚಿ, ಈ ವಿಭಾಗದ ಆಶಾ ಕಾರ್ಯಕರ್ತೆ ನಾಗರತ್ನ, ಸುಲೇಖಾ ಸೇರಿದಂತೆ ಈ ವ್ಯಾಪ್ತಿಯ ಮಹಿಳೆಯರು, ಗರ್ಭಿಣಿಯರು ಭಾಗವಹಿಸಿದ್ದರು.