ನಾಪೆÇೀಕ್ಲು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನಾಪೋಕ್ಲುವಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ದ್ವೀಪದಂತಾಗಿದೆ. ಕೊಟ್ಟಮುಡಿ ಬಳಿ ಕಾವೇರಿ ನದಿ ರಸ್ತೆಯ ಮೇಲೆ ಹರಿಯುತ್ತಿದೆ.

ಕಾವೇರಿ ನದಿ ಹರಿಯುತ್ತಿರುವ ಬೊಳಿಬಾಣೆಯಲ್ಲಿ ಕಾವೇರಿ ನದಿ ನೀರಿನ ಪ್ರವಾಹ ರಸ್ತೆಯಲ್ಲಿ ಹರಿಯುತ್ತಿದ್ದು, ನಾಪೆÇೀಕ್ಲು – ಮೂರ್ನಾಡು ವಾಹನ ಸಂಚಾರ ಸ್ಥಗಿತಗೊಂಡಿದೆ.ಕಕ್ಕಬ್ಬೆ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾದ ಹಿನ್ನಲೆಯಲ್ಲಿ ನಾಪೆÇೀಕ್ಲು - ಪಾರಾಣೆ ರಸ್ತೆಯ ಎತ್ತುಕಡು ಬಳಿ ಪ್ರವಾಹ ಉಂಟಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಕೊಳಕೇರಿ ಕೋಕೆರಿ ಸಂಪರ್ಕ ರಸ್ತೆಯಲ್ಲಿ ರಸ್ತೆಯು ಜಲಾವೃತಗೊಂಡಿದೆ. ಎಮ್ಮೆಮಾಡು ಗ್ರಾಮದಲ್ಲಿ ನಾಟಿ ಮಾಡಿದ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತವಾಗಿವೆ. ನಾಪೋಕ್ಲು ಸಂಪರ್ಕಿಸುವ ವಿವಿಧ ರಸ್ತೆಗಳು ಸಂಪರ್ಕ ಕಡಿತಗೊಂಡಿದ್ದು ನಾಪೋಕ್ಲು ಪಟ್ಟಣ ದ್ವೀಪದಂತಾಗಿದೆ. ಪಾಲೂರಿನ ಹರಿಶ್ಚಂದ್ರ ದೇವಾಲಯವು ಕಳೆದ ಹದಿನೈದು ದಿನಗಳಿಂದ ಸಂಪೂರ್ಣ ಜಲಾವೃತವಾಗಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಎರಡು ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ದೇವಾಲಯ ಮುಳುಗಡೆಯಾಗಿದೆ. ಚೆರಿಯಪರಂಬುವಿನಲ್ಲಿ ನೀರಿನ ಪ್ರವಾಹ ಉಕ್ಕಿ ಹರಿಯುತ್ತಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಲ್ಲಿನ ಬಹುತೇಕ ಜೋಪಡಿಗಳು ಜಲಾವೃತವಾಗಿದ್ದು ನಿವಾಸಿಗಳು ಸಂಕಷ್ಟ ಅನುಭವಿಸುವಂತಾಗಿದೆ. -ದುಗ್ಗಳ

* ಚೆಟ್ಟಿಮಾನಿ : ಕುಂದಚೇರಿ ಗ್ರಾ.ಪಂ.ನ ಚೆಟ್ಟಿಮಾನಿ ನಿವಾಸಿ, ಮುಕ್ಕಾಟಿ (ಚಿಂಡನ) ಸಾವಿತ್ರಿ ಅವರಿಗೆ ಸೇರಿದ ಮನೆ ಕುಸಿದು ಬಿದ್ದು ನಷ್ಟ ಸಂಭವಿಸಿದೆ.