ಸೋಮವಾರಪೇಟೆ: ತಾಲೂಕಿನ ಅಬ್ಬೂರುಕಟ್ಟೆ-ಹೊಸಳ್ಳಿ, ಮದಲಾಪುರ ಮೂಲಕ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ಸೀಗೇಹೊಸೂರು ಬಳಿಯಲ್ಲಿ ನಿರ್ಮಿಸಲಾಗಿರುವ ಸೇತುವೆ ಭಾರೀ ಮಳೆಗೆ ಮುಳುಗಡೆಯಾಗಿದೆ.

ಸೀಗೇಹೊಸೂರು ಹೊಳೆಯಲ್ಲಿ ನೀರಿನ ಹರಿವು ಅಧಿಕಗೊಂಡಿದ್ದು, ಸೇತುವೆಯ ಮೇಲೆ ಹರಿಯುತ್ತಿದೆ. ಇದರಿಂದಾಗಿ ಈ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.