ಮಡಿಕೇರಿ, ಆ. 14: ಕೊಡಗು-ಮಂಗಳೂರು ರಾಜ್ಯ ಹೆದ್ದಾರಿಯಲ್ಲಿ ಸದ್ಯಕ್ಕೆ ಯಾವದೇ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವದಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಹೇಳಿದ್ದಾರೆ.ರಾಜ್ಯ ಹೆದ್ದಾರಿಯ ಮದೆನಾಡು ಬಳಿ ಭಾರೀ ಭೂಕುಸಿತಗೊಂಡಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು, ‘ಶಕ್ತಿ’ಯೊಂದಿಗೆ ಮಾತನಾಡಿ, ಭಾರೀ ಗಾತ್ರದಲ್ಲಿ ಭೂಕುಸಿತವಾಗಿದ್ದು, ತೆರವು ಕಾರ್ಯ ಭರದಿಂದ ಸಾಗುತ್ತಿದೆ. ತೆರವುಗೊಳಿಸಿದಂತೆ ಮತ್ತೆ ಕುಸಿತವುಂಟಾಗುತ್ತಿದೆ.