ಮಡಿಕೇರಿ, ಆ. 14: ಸ್ವಾತಂತ್ರ್ಯೋತ್ಸವದ ಅಂಗವಾಗಿ ಮುಖ್ಯಮಂತ್ರಿಗಳು ಧ್ವಜಾರೋಹಣ ಮಾಡುವ ಸಮಯದಲ್ಲಿ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಪಥ ಸಂಚಲನದಲ್ಲಿ ಭಾಗವಹಿಸಲು ಜನರಲ್ ತಿಮ್ಮಯ್ಯ ಶಾಲೆಯ 2 ಸ್ಕೌಟ್ಸ್, 1 ಗೈಡ್ಸ್ ಮತ್ತು ಅರಮೇರಿ ಶಾಲೆಯ ಒಬ್ಬಳು ಗೈಡ್ ಕೊಡಗು ಜಿಲ್ಲೆಯಿಂದ ಶಿಕ್ಷಕರಾದ ಈರಪ್ಪ ಅವರೊಂದಿಗೆ ತೆರಳಿದ್ದು, ಕರ್ನಾಟಕ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ತಂಡವನ್ನು ಜನರಲ್ ತಿಮ್ಮಯ್ಯ ಶಾಲೆಯ ತಶಿ ಪೊನ್ನಮ್ಮ ಅವರು ಮುನ್ನಡೆಸುತ್ತಿದ್ದಾಳೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಕೆ.ಯು. ರಂಜಿತ್ ಅವರು ತಿಳಿಸಿದ್ದಾರೆ.