ಮಡಿಕೇರಿ, ಆ. 13: ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಸಾಕಷ್ಟು ಹಾನಿ ಸಂಭವಿಸಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ. ಮಹೇಶ್ ಅವರು ತಾ.14ರಂದು (ಇಂದು) ಮತ್ತು ತಾ.15ರಂದು (ನಾಳೆ) ಕೊಡಗು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ.

14ರಂದು ಬೆಳಿಗ್ಗೆ 9.45ಕ್ಕೆ ತಿತಿಮತಿಗೆ ಆಗಮಿಸಿ, ಮಳೆಯಿಂದ ಹಾನಿಯಾದ ಸೇತುವೆ ಪರಿಶೀಲನೆ ಮಾಡಲಿದ್ದಾರೆ. ನಂತರ ತಿತಿಮತಿ, ಬಾಳೆಲೆ, ನಿಟ್ಟೂರುವಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12.15ಕ್ಕೆ ಮಾಕುಟ್ಟಕ್ಕೆ ತೆರಳಿ ಮಳೆಯಿಂದ ಹಾನಿಗೊಳಗಾದ ಕೊಣನೂರು- ಮಾಕುಟ್ಟ ಅಂತರ್ರಾಜ್ಯ ರಸ್ತೆ ವೀಕ್ಷಣೆ ಮಾಡಲಿದ್ದಾರೆ. 1.30ಕ್ಕೆ ವೀರಾಜಪೇಟೆ ಕಡಂಗ, ಕಕ್ಕಬೆ, ಅಯ್ಯಂಗೇರಿ ಮೂಲಕ ಭಾಗಮಂಡಲಕ್ಕೆ ತೆರಳಿ ನೆರೆ ಬರುವಂತಹ ಸ್ಥಳವನ್ನು ವೀಕ್ಷಣೆ ಮಾಡಲಿದ್ದಾರೆ. ಬಳಿಕ ಮದೆನಾಡು ಸಮೀಪ ಹಾನಿಗೊಳಗಾಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ಪರಿಶೀಲಿಸಲಿದ್ದಾರೆ. ಬಳಿಕ ಮಡಿಕೇರಿಯಲ್ಲಿ ವಾಸ್ತವ್ಯ ಹೂಡಲಿದ್ದು, ತಾ. 15ರಂದು (ನಾಳೆ) ಬೆಳಿಗ್ಗೆ ಕೋಟೆ ಆವರಣದಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಂತರ ಆನೆಕಾಡಿನಲ್ಲಿ ಗಾಯಗೊಂಡಿರುವ ಆನೆಯನ್ನು ವೀಕ್ಷಿಸಿ, ಕುಶಾಲನಗರ ಮೂಲಕ ಮೈಸೂರಿಗೆ ಹಿಂತಿರುಗಲಿದ್ದಾರೆ.