ಸುಂಟಿಕೊಪ್ಪ, ಆ. 13: ಇಲ್ಲಿನ ತಲೆ ಹೊರೆ ಕಾರ್ಮಿಕ ಸಂಘ ಮತ್ತು ಕನ್ನಡ ಅಭಿಮಾನಿಗಳ ಸಂಘದ ವಾರ್ಷಿಕ ಮಹಾಸಭೆ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಎಂ.ಎಸ್. ರವಿ ಅಧ್ಯಕ್ಷತೆಯಲ್ಲಿ ನಡೆಯಿತು.

ನಂತರ ನೂತನ ಅಧ್ಯಕ್ಷ ಪದಾಧಿಕಾರಿಗಳ ಆಯ್ಕೆ ನಡೆದು ಅಧ್ಯಕ್ಷರಾಗಿ ಎಂ.ಎಸ್. ರವಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸಂತೋಷ್ ಕುಮಾರ್, ಕಾರ್ಯದರ್ಶಿಯಾಗಿ ಖಾಸಿಂ, ಸಹ ಕಾರ್ಯದರ್ಶಿಯಗಿ ಮಾದೇಶ, ಖಜಾಂಚಿಯಾಗಿ ಜಭಿ, ಸಂಘಟನಾ ಕಾರ್ಯದರ್ಶಿಯಾಗಿ ರಾಜ (ಕುಮ್ಟಿ), ಸ್ವಾಮಿ, ಗೌರವ ಅಧ್ಯಕ್ಷರಾಗಿ ಇಲಿಯಾಸ್ ಸಮಿತಿ ಸದಸ್ಯರಾಗಿ ಚಂದ್ರ, ವಸಂತ, ಸುಂದರ, ಶೇಖರ, ರಾಮು ಮತ್ತಿತರರನ್ನು ಆಯ್ಕೆ ಮಾಡಲಾಯಿತು.