*ಸಿದ್ದಾಪುರ, ಆ. 13: ಸಮೀಪದ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘವು ಚುನಾವಣಾ ಹೊಸ್ತಿಲಿನಲ್ಲಿ ರುವ ಬೆನ್ನ ಹಿಂದೆಯೇ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿದ್ದ 6 ಮಂದಿ ಅವಿರೋಧವಾಗಿ ಆಯ್ಕೆಗೊಂಡಿ ದ್ದಾರೆ.
ಪರಿಶಿಷ್ಟ ಪಂಗಡ ಅಭ್ಯರ್ಥಿ ಯಾಗಿ ಸೀತಮ್ಮ, ಪರಿಶಿಷ್ಟ ಪಂಗಡದಿಂದ ಶಾಂತಪ್ಪ, ಸಾಮಾನ್ಯ ಮಹಿಳಾ ಅಭ್ಯರ್ಥಿಯಾಗಿ ಕೊಂಗೇಟಿರ ರಾಣಿ ಕಾಳಪ್ಪ, ಪುತ್ತೇರಿರ ಸೀತಮ್ಮ, ಬಿಸಿಎಂ(ಎ)ನಿಂದ ಧನಂಜಯ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಬಲ್ಲಾರಂಡ ಮಣಿ ಉತ್ತಪ್ಪ, ಉಪಾಧ್ಯಕ್ಷ ಹೆಚ್.ಎಸ್. ತಿಮ್ಮಪ್ಪಯ್ಯ, ಬಟ್ಟೀರ ಅಪ್ಪಣ್ಣ, ಪೇರಿಯನ ಪೂಣಚ್ಚ, ಕಡಂಜಾಲು ಪೂವಯ್ಯ, ಮರದಾಳು ಉಲ್ಲ್ಲಾಸ್ ಸ್ಪರ್ಧಾ ಕಣದಲ್ಲಿದ್ದಾರೆ. ಇವರೊಂದಿಗೆ ಕೆಚ್ಚೆಟೀರ ಡಿಕ್ಕಿ ಅಪ್ಪಯ್ಯ, ಪುತ್ತರಿರ ಪಪ್ಪು ತಿಮ್ಮಯ್ಯ, ತೀರ್ಥಕುಮಾರ್, ಬಲ್ಲಾರಂಡ ಹರೀಶ್ ಹಾಗೂ ವಿಜಯ್ ಸ್ಪರ್ಧೆಯಲ್ಲಿದ್ದಾರೆ.