*ಸಿದ್ದಾಪುರ, ಆ. 12: ದಿಡ್ಡಳಿಯಲ್ಲಿ ವಸತಿ ರಹಿತರು ವಸತಿಗಾಗಿ ಪ್ರತಿಭಟನೆ ನಡೆಸಿ ನಿರಾಶ್ರಿತರ ಸಮಸ್ಯೆ ಬಗೆ ಹರಿಯಿತು ಎಂದು ನಿಟ್ಟುಸಿರುವ ಬಿಡುವ ಮುನ್ನವೇ ಮತ್ತೊಂದು ಹೋರಾಟದ ಕಿಡಿ ದಿಡ್ಡಳ್ಳಿಯ ನೆರೆಯ ಹಾಡಿ ತಟ್ಟಳ್ಳಿಯಿಂದ ಹೊತ್ತಿಕೊಳ್ಳುವ ಸುಳಿವು ಕಾಣಿಸಲಾರಂಭಿಸಿದೆ.

ದಿಡ್ಡಳ್ಳಿಯಲ್ಲಿ ವಾಸ ಮಾಡಿಕೊಂಡಿರುವ ಗಿರಿಜನ ಕುಟುಂಬಗಳಿಗೆ ಕೇಂದ್ರ ಸರ್ಕಾರ ಹಕ್ಕುಪತ್ರ ನೀಡಿತ್ತು ಆದರೆ ನೆರೆಯ ತಟ್ಟಳ್ಳಿಯಲ್ಲಿ ಸುಮಾರು 60 ವರ್ಷದಿಂದ ವಾಸ ಮಾಡಿಕೊಂಡಿರುವ 45 ಗಿರಿಜನ ಕುಟುಂಬಗಳಿಗೆ ಸರ್ಕಾರ ಇನ್ನು ಹಕ್ಕು ಪತ್ರ ನೀಡಿಲ.್ಲ ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಗಿರಿಜನ ಮುಖಂಡ ಅಪ್ಪಾಜಿ ಹೇಳಿದ್ದಾರೆ. ದಿಡ್ಡಳ್ಳಿಯಲ್ಲಿ ವಾಸ ಮಾಡಿಕೊಂಡಿರುವ ಗಿರಿಜನರಿಗೆ ಸರ್ಕಾರ ಕೃಷಿ ಭೂಮಿಗಳನ್ನು ನೀಡಿ ಹಕ್ಕು ಪತ್ರ ನೀಡಿದ್ದರೂ ಬ್ಯಾಂಕ್‍ನಿಂದ ಯಾವದೇ ಬಗ್ಗೆಯ ಸಾಲ ಹಾಗೂ ಇತರೆ ಸೌಲಭ್ಯ ಸಿಗುತ್ತಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.

ದಿಡ್ಡಳ್ಳಿ ಗಿರಿಜನರಿಗೆ 1 ಎಕರೆಯಿಂದ 10 ಎಕರೆವರೆಗೆ ಕೃಷಿ ಭೂಮಿಯನ್ನು ಸರ್ಕಾರ ನೀಡಿದೆ. ಜೊತೆಗೆ ಇವರು ಹೊಂದಿರುವ ಕೃಷಿ ಭೂಮಿಗೆ ಹಕ್ಕು ಪತ್ರವೂ ಲಭಿಸಿದೆ. ಆದರೇ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಯಾವದೇ ಸೌಲಭ್ಯ ಸಿಗುತ್ತಿಲ್ಲ ಇದರಿಂದ ಕೃಷಿ ಚಟುವಟಿಕೆಗಳಿಂದ ಅನೇಕ ಮಂದಿ ವಂಚಿತರಾಗಿದ್ದಾರೆ ಎಂದು ಗಿರಿಜನರು ಅಸಮಾಧಾನ ತೋಡಿ ಕೊಂಡಿದ್ದಾರೆ. ಕೆಲವು ಗಿರಿ ಜನರು ಸರ್ಕಾರ ಮಂಜೂರು ಮಾಡಿರುವ ಕೃಷಿ ಪರಿಕರ ಗಳನ್ನು ಹೊರಗಿನವರಿಗೆ ಮಾರಾಟ ಮಾಡುತ್ತಿದ್ದು ಇದನ್ನು ಸಂಬಂಧಿಸಿದ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕೆಂದು ಅಪ್ಪಾಜಿ ಹೇಳಿದರು. ಕೆಲವು ಗಿರಿಜನರು ಪ್ರಭಾವಿಗಳ ಆಮಿಷಕ್ಕೆ ಬಲಿಯಾಗಿ ತಮಗೆ ದೊರಕಿದ ಕೃಷಿ ಸಾಮಗ್ರಿಗಳನ್ನು ಮಾರಾಟ ಮಾಡಿರುವ ಪ್ರಕರಣ ಪತ್ತೆ ಹಚ್ಚಿದ್ದು ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕುವ ಕೆಲಸಕ್ಕೆ ಮುಂದಾಗಬೇಕೆಂದು ಗಿರಿಜನ ಮುಖಂಡರು ತಿಳಿಸಿದರು. ಸರ್ಕಾರ ಗಿರಿಜನರಿಗೆ ವಿವಿಧ ಗಿಡಗಳನ್ನು, ತಂತಿ ಬೇಲಿ ಮುಂತಾದವುಗಳನ್ನು ನೀಡಿದರೂ ಗಿರಿಜನರು ಸಮರ್ಪಕವಾಗಿ ಬಳಸಿಕೊಳ್ಳದ ಇರುವದರಿಂದ ಸರ್ಕಾರದ ಯೋಜನೆಗಳು ಪೋಲಾಗುತ್ತಿದೆ. ಅಧಿಕಾರಿಗಳೇ ಕೃಷಿ ಚಟುವಟಿಕೆಯ ಮೇಲ್ವಿಚಾರಣೆ ವಹಿಸಿಕೊಂಡು ಗಿರಿಜನರು ಕೃಷಿ ಚಟುವಟಿಕೆಯಲ್ಲಿ ಜವಬ್ದಾರಿಯುತವಾಗಿ ಪಾಲ್ಗೊಳ್ಳುವಂತೆ ಮಾಡಿದರೆ ಸರ್ಕಾರಕ್ಕೂ ಇತ್ತ ಗಿರಿಜನ ಕುಟುಂಬಗಳಿಗೂ ಲಾಭವಾಗುತ್ತದೆ ಎಂದರು.

ಇಲ್ಲಿಯ ಗಿರಿಜನ ಆಶ್ರಮ ಶಾಲೆಯ ಆಟದ ಮೈದಾನದಲ್ಲಿ ಚನ್ನಂಗಿ ಗಿರಿಜನರ ವಸತಿ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು ಓವರ್‍ಹೆಡ್ ನೀರಿನ ಟ್ಯಾಂಕ್ ನಿರ್ಮಿಸ ಲಾಗಿದ್ದರೂ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದ ಕಾರಣ ಕುಡಿಯುವ ನೀರಿನ ಸರಬರಾಜು ಯೋಜನೆಯೂ ಕನಸ್ಸಾಗಿಯೇ ಉಳಿದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ದಿಡ್ಡಳ್ಳಿಯಲ್ಲಿ ಗಿರಿಜನರಿಗೆ ಬುಡಕಟ್ಟು ವ್ಯವಹಾರ ಗಳ ಮಂತ್ರಾಲಯ ಪ್ರತಿಯೊಬ್ಬರಿಗೂ 3 ಏಕ್ರೆಯಂತೆ ವಿಂಗ ಡಿಸಿ ಹಕ್ಕುಪತ್ರವನ್ನು ನೀಡಲಾಗಿದೆ. ತಮ್ಮ ಸ್ವಾಧೀನದ ಭೂಮಿಯಲ್ಲಿ ಅನೇಕ ಗಿರಿಜನರು ಕಾಫಿ ಹಾಗೂ ಕಾಳುಮೆಣಸಿನ ತೋಟವನ್ನು ಮಾಡಿ ರುತ್ತಾರೆ ಆದರೆ ಕೃಷಿ ಭೂಮಿಯಲ್ಲಿ ನೀರಿನ ಕೊರತೆ ಇದ್ದು ಗಿರಿಜನರಿಗೆ ನೀರಿನ ವ್ಯವಸ್ಥೆಗಾಗಿ ರೂಪಿಸಿರುವ ಗಂಗಾ ಕಲ್ಯಾಣ ಯೋಜನೆ ಇಲ್ಲಿಯ ಗಿರಿಜನರಿಗೆ ಲಭ್ಯವಾಗಿಲ್ಲ ಎಂದು ಸ್ಥಳೀಯರಾದ ಜೆ.ಎ. ಅಣ್ಣಯ್ಯ ಹೇಳಿದ್ದಾರೆ. ಕೃಷಿಕರಿಗೆ ಹಕ್ಕು ಪತ್ರಗಳಿದ್ದರೂ ಯಾವದೇ ಸರ್ಕಾರದ ಅನುದಾನ ಗಳು ಲಭ್ಯವಾಗದ ಹಿನ್ನೆಲೆ ದಿಡ್ಡಳ್ಳಿಯ ಗಿರಿ ಜನರು ಪ್ರತಿಭ ಟನೆಗೆ ಮುಂದಾ ಗಿದ್ದಾರೆ ಎಂದು ಅಪ್ಪಾಜಿ ಆರೋಪಿಸಿದ್ದಾರೆ.

- ಅಂಚೆಮನೆ ಸುಧಿ