ಸಿದ್ದಾಪುರ, ಆ. 12: ಕೊಡಗು ಪ್ಲಾಂಟರ್ಸ್ ಅಸೋಸಿಯೇಶನ್‍ನ 139ನೇ ವಾರ್ಷಿಕ ಮಹಾಸಭೆಯು ಅಮ್ಮತ್ತಿಯ ಕೊಡವ ಸಮಾಜದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉಪಾಸಿ ಸಂಘಟನೆಯ ಅಧ್ಯಕ್ಷ ಟಿ. ಜಯರಾಮನ್ ಉದ್ಘಾಟಿಸಿದರು. ಕರ್ನಾಟಕ ಪ್ಲಾಂಟರ್ಸ್ ಅಸೋಸಿ ಯೇಶನ್ (ಕೆ.ಪಿ.ಎ) ಉಪಾಸಿ, ಸಣ್ಣ ಬೆಳೆಗಾರರ ಸಂಘ, ಕ್ಯಾಂಪ್ಕೊ, ಅಡಿಕೆ ಬೆಳೆಗಾರರ ಸಂಘ, ಕಾಫಿ ಮಂಡಳಿ, ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಕೇಂದ್ರ, ಕೇಂದ್ರೀಯ ಕೃಷಿ ವಿಜ್ಞಾನ ಕೇಂದ್ರ, ಕಾಫಿ ಸಂಶೋಧನಾ ಕೇಂದ್ರ, ಟಾಟಾ ಕಾಫಿ, ಸಣ್ಣ ಬೆಳೆಗಾರರ ಸಂಘ, ಕೊಡಗು ಮಹಿಳಾ ಕಾಫಿ ಉದ್ಯಮಿಗಳ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿಗಳು ಹಾಗೂ ವಿವಿಧ ಸಂಸ್ಥೆಗಳ ಉದ್ಯಮಿಗಳಿಂದ ಮತ್ತು ಸಂಪನ್ಮೂಲ ವ್ಯಕ್ತಿಗಳು ಸಭೆಯಲ್ಲಿ ಕೃಷಿ, ಕಾಫಿ ಸಮಸ್ಯೆ ಮತ್ತು ಪರಿಹಾರ ಸೇರಿದಂತೆ ಬೆಳೆಗಾರರ ಆರ್ಥಿಕ ಭದ್ರತೆಗೆ ಪಾಲಿಸಬೇಕಾದ ಕೃಷಿ ಪದ್ದತಿಗಳ ಕುರಿತು ಮಾಹಿತಿ ನೀಡಿದರು.ಸಿಪಿಎ ಅಧ್ಯಕ್ಷ ಬಿ.ಎಂ. ಬೋಪಯ್ಯ ಮಾತನಾಡಿ, ಕಾಫಿ ಬೆಲೆ ಕುಸಿತ ಮತ್ತು ಉತಾದನಾ ವೆಚ್ಚ ಹೆಚ್ಚುತ್ತಿರುವದು, ಅನಧಿಕೃತವಾಗಿ ವಿಯೆಟ್ನಾಂ ದೇಶದಿಂದ ಕಾಳುಮೆಣಸು ಆಮದು, ಆನೆ ಮಾನವ ಸಂಘರ್ಷ, ಕಾಫಿ ಮಂಡಳಿ, ಚಹಾ ಮಂಡಳಿ ಸೇರಿದಂತೆ ಐದು ಪ್ರಮುಖ ವಾಣಿಜ್ಯ ಬೆಳೆಗಳ ಮಂಡಳಿಗಳ ವಿಲೀನಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವದು, ಕೃಷಿ ಬಳಕೆಯ ವಿದ್ಯುತ್ ದರ ಏರಿಕೆ, ಮುಕ್ತ ವ್ಯಾಪಾರ ನೀತಿಯ ತೊಡಕುಗಳು ಹಾಗೂ ಕೃಷಿ ಸಾಲಗಳ ಲಭ್ಯತೆ ಮತ್ತು ಸಮಸ್ಯೆಗಳ ಕುರಿತು ಆಕ್ಷೇಪ ಮಂಡಿಸಿದರು.
ಕೃಷಿ ತಜ್ಞ ಹಾಗೂ ಅಗ್ರಿಪ್ಲೆಕ್ಸ್ ಸೇವಾ ಸಂಸ್ಥೆಯ ಡಾ. ನಾರಾಯಣ ಸ್ವಾಮಿ ಕಾಳುಮೆಣಸು ಬಳ್ಳಿಗಳ ನಿರ್ವಹಣೆ ಮತ್ತು ಕೀಟಬಾಧೆಗಳಿಗೆ ಪರಿಹಾರದ ಕುರಿತು ಮಾಹಿತಿ ನೀಡಿದರು.
ಕೃಷಿಯಲ್ಲಿ ಗೊಬ್ಬರ ಮತ್ತು ಪ್ರಸ್ತುತ ಹವಾಮಾನಕ್ಕೆ ಅನುಗುಣವಾಗಿ ಬೆಳೆಗಳ ನಿರ್ವಹಣೆ ಕುರಿತು ಸಕಲೇಶಪುರದ ಕಾಫಿ ಬೆಳೆಗಾರ ಹೆಚ್.ಎಸ್. ಧರ್ಮರಾಜ್ ಮಾಹಿತಿ ನೀಡಿದರು.
(ಮೊದಲ ಪುಟದಿಂದ)
ಆರ್ಥಿಕ ತಜ್ಞ ಹಾಗೂ ಬೆಂಗಳೂರಿನ ರಿಸರ್ಜಂಟ್ ಆಗ್ರಿಕ್ ಮುಖ್ಯಸ್ಥ ನಿರ್ಮಲ್ ಕೆ. ಭಾರದ್ವಾಜ್ ಜಿಲ್ಲೆಯ ಕಾಫಿ ಪರ ಸಂಘಟನೆಗಳು ಜಿಲ್ಲೆಯಲ್ಲಿ ಯಥೇಚ್ಛವಾಗಿ ಹಬ್ಬಿಕೊಂಡಿದ್ದರೂ ಅಂತರಾಷ್ಟ್ರೀಯ ಕಾಫಿ ಮೇಳವೊಂದನ್ನು ಜಿಲ್ಲೆಯಲ್ಲಿ ನಡೆಸಲು ಸಾಧÀ್ಯವಾಗಲಿಲ್ಲ ಏಕೆ ಎಂದು ಅವರು ಪ್ರಶ್ನಿಸಿದರು. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕೊಡಗು ಕಾಫಿ, ಹಾಸನದ ಕಾಫಿ ಎಂದು ವಿಂಗಡಿಸದೆ ಕರ್ನಾಟಕ ಕಾಫಿ ಎಂಬ ಒಂದೇ ಸೂರಿನಡಿಯಲ್ಲಿ ಕಾಫಿ ಸಂಬಂಧಿತ ಮಾರುಕಟ್ಟೆ ವ್ಯವಸ್ಥೆಯನ್ನು ರೂಪಿಸುವದು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಸಿಪಿಎ ಪ್ರಮುಖ ವಿಶ್ವನಾಥ್ ಹಾಗೂ ಪೂವಯ್ಯ ಮಾತನಾಡಿ, ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಮಿತಿಮೀರಿದೆ, ಆಮದುದಾರರ ಮಾರುಕಟ್ಟೆ ವ್ಯವಸ್ಥೆಗಳ ದುರುಪಯೋಗ ಮತ್ತು ಅಂತರ್ರಾಷ್ಟ್ರೀಯ ಒಪ್ಪಂದಗಳ ದುರ್ಬಳಕೆ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿರು ವದಾಗಿ ಮಾಹಿತಿ ನೀಡಿದರು. ಕಾಫಿ ಹಾಗೂ ಕಾಳು ಮೆಣಸು ಬೆಲೆ ನಿಗದಿಪಡಿಸುವ ಕುರಿತು ಮುಂದಿನ ದಿನಗಳಲ್ಲಿ ವಿಸ್ತೃತ ಚರ್ಚೆ ಆಯೋಜಿಸಿರುವದಾಗಿಯೂ ಕಾಳು ಮೆಣಸು ಮಾರುಕಟ್ಟೆ ದರ ಏರುವದರ ಕುರಿತು ಯಾವದೇ ಕುರುಹುಗಳು ಲಭ್ಯವಾಗದ ಹಿನೆÀ್ನಲೆಯಲ್ಲಿ ವಿಯೆಟ್ನಾಂ ದೇಶದೊಂದಿಗಿನ ಒಪ್ಪಂದ ಸೇರಿದಂತೆ ಕಾಳುಮೆಣಸು ಆಮದುದಾರರಿಂದ ಉಂಟಾಗುವ ವಿವಿಧ ಸುಂಕಗಳ ದುರುಪಯೋಗಗಳ ಕುರಿತು ಸಾರ್ಕ್, ಆಸಿಯನ್ ಒಪ್ಪಂದಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ದೇಶದ ರೈತರಿಗೆ ಪರೋಕ್ಷವಾಗಿ ಬಾಧಿಸುವ ಬೆಲೆ ಕುಸಿತದ ಆಪತ್ತನ್ನು ಮನವರಿಕೆ ಮಾಡಬೇಕಿದೆ ಎಂದು ಮಾಹಿತಿ ನೀಡಿದರು.
ಮಹಿಳಾ ಕಾಫಿ ಉದÀ್ಯಮಿಗಳ ಸಂಘಟನೆಯ ಪ್ರಮುಖರಾದ ಚಿತ್ರ ಸುಬ್ಬಯ್ಯ ಮಾತನಾಡಿ, ಸಂಘಟನೆಯ ಮುಖಾಂತರ ಕಾಫಿ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವದಾಗಿ ತಿಳಿಸಿದರು. ಸಿಪಿಎ ಉಪಾಧ್ಯಕ್ಷ ಕೆ.ಜಿ.ರಾಜೀವ್ ವಂದಿಸಿದರು.
-ವರದಿ: ಎ.ಎನ್. ವಾಸು