ವೀರಾಜಪೇಟೆ, ಆ. 12: ವಿಶಿಷ್ಟವಾದ ಕೊಡವರ ಸಾಂಸ್ಕøತಿಕ ಆಚಾರ ವಿಚಾರ, ಪದ್ದತಿ, ಪರಂಪರೆಗಳನ್ನು ಉಳಿಸಿ ಶಾಶ್ವತವಾಗಿ ಮುಂದುವರೆಸಲು ಹೆಣ್ಣು ಮಕ್ಕಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ವೀರಾಜಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷ ನಾಯಡ ವಾಸು ನಂಜಪ್ಪ ಅಭಿಪ್ರಾಯಪಟ್ಟರು.

ವೀರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಇಂದು ವೀರಾಜಪೇಟೆ ಕೊಡವ ಸಮಾಜದ ಪೊಮ್ಮಕ್ಕ ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಿಂದಿನಿಂದಲೂ ನಡೆದುಬಂದ ಪದ್ಧತಿಗಳನ್ನು ಮುಂದೆಯೂ ಪಾಲಿಸುವದು ಸೂಕ್ತ. ಹೆಣ್ಣು ಮಕ್ಕಳು ಸದಾ ಕ್ರಿಯಾಶೀಲರಾಗಿರುವದ ರೊಂದಿಗೆ ನಮ್ಮ ಆಚಾರ ವಿಚಾರಗಳನ್ನು ಪಾಲಿಸಬೇಕು. ಜತೆಗೆ ಬೊಳ್‍ಕಾಟ್ ಉಮತ್ತಾಟ್‍ಗಳಂತಹ ನಮ್ಮ ಜನಪದ ಕಲೆಯನ್ನು ಶಾಶ್ವತವಾಗಿ ಉಳಿಸಿಕೊಂಡು ಹೋಗುವದು ಸಮುದಾಯದ ನಮ್ಮೆಲ್ಲರ ಕರ್ತವ್ಯ ಎಂದರು.

ಸಾಹಿತಿ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ಮಾತನಾಡಿ, ವಿಶಿಷ್ಟವಾದ ಕೊಡವ ಸಂಸ್ಕøತಿ, ಆಚಾರ ವಿಚಾರ, ಪದ್ದತಿ ಪರಂಪರೆಯ ಬಗ್ಗೆ ಕಿರಿಯರಲ್ಲಿಯೂ ನಿರಂತರವಾಗಿ ಅರಿವು ಮೂಡಿಸಬೇಕು ಎಂದು ಹೇಳಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಡವ ಸಮಾಜದ ಪೊಮ್ಮಕ್ಕ ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಮಾತನಾಡಿ, ನಮ್ಮ ಸಂಸ್ಕøತಿ ಮತ್ತು ಆಚಾರ ವಿಚಾರಗಳನ್ನು ಉಳಿಸುವದು ಸಮಾಜದ ಹೆಣ್ಣು ಮಕ್ಕಳ ಜವಾಬ್ದಾರಿ ಆಗಿದೆ ಎಂದರು.

ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚೀರ ವಿಠಲ ನಾಣಯ್ಯ ಮಾತನಾಡಿದರು.

ವೇದಿಕೆಯಲ್ಲಿ ಸಂಘಟನೆಯ ಉಪಾಧ್ಯಕ್ಷೆ ಪಿ.ಮನು ಸುಬ್ಬಯ್ಯ, ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಯಪ್ಪ, ಸಲಹೆಗಾರರಾದ ಕುಪ್ಪಂಡ ಪುಷ್ಪ ಮುತ್ತಣ್ಣ, ಚಲ್ಮಂಡ ಗೌರಿ ಮೊಣ್ಣಪ್ಪ, ಮಹಿಳಾ ಸಮಾಜ ಅಧ್ಯಕ್ಷೆ ಕುಸುಮ ಸೋಮಣ್ಣ, ಗೀತಾ ಬೆಳ್ಯಪ್ಪ, ಆಶಾ ಸುಬ್ಬಯ್ಯ, ದಮಯಂತಿ ಉಪಸ್ಥಿತರಿದ್ದರು. ಖಜಾಂಚಿ ಪೊಯ್ಯೇಟಿರ ಬಾನು ಭೀಮಯ್ಯ ವರದಿ ಮಂಡಿಸಿದರು. ಒಕ್ಕೂಟದ ನಿರ್ದೇಶಕಿ ತಾತಂಡ ಪ್ರಭಾ ನಾಣಯ್ಯ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸ್ಪರ್ಧೆಗಳು, ಕಕ್ಕಡ ತಿಂಗಳ ಕುರಿತು ಚರ್ಚೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ವಿವಿಧೆಡೆಗಳಿಂದ ಸಮುದಾಯದ ಹೆಣ್ಣು ಮಕ್ಕಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.