ಸಿದ್ದಾಪುರ, ಆ. 12: ಒಡಿಪಿ ಸಂಸ್ಥೆ ಮೈಸೂರು ಮತ್ತು ನಬಾರ್ಡ್ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಹೊಲಿಗೆ ಮತ್ತು ವಸ್ತ್ರ ವಿನ್ಯಾಸ ಶಿಬಿರದಲ್ಲಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ಇಲ್ಲಿನ ಸೆಂಟಿನರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಡಿಕೇರಿ, ಬೆಟ್ಟದಕಾಡು ಮತ್ತು ಪಾಲಿಬೆಟ್ಟದ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದ 96 ಜನರಿಗೆ ಸಂಸ್ಥೆ ವತಿಯಿಂದ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

ಸಿದ್ದಾಪುರ ಸಂತ ಜೋಸೆಫರ ದೇಗುಲದ ಧರ್ಮಗುರು ಜೋನೆಸ್ ಕಾರ್ಯಕ್ರಮ ಉದ್ಘಾಟಿಸಿದರು. ಪಾಲಿಬೆಟ್ಟ ಗ್ರಾ.ಪಂ. ಅಧ್ಯಕ್ಷ ಪುಲಿಯಂಡ ಬೋಪಣ್ಣ ಅಧ್ಯಕ್ಷತೆ ವಹಿಸಿದ್ದರು. ಅಧಿಕಾರಿಗಳಾದ ಮಮ್ತಾಜ್, ಮುಂಡಂಡ ಸಿ. ನಾಣಯ್ಯ, ಮೋಲಿ ಘಡ್ತಾದೋ ಮತ್ತಿತರರಿದ್ದರು.