ಗೋಣಿಕೊಪ್ಪ ವರದಿ, ಆ. 12: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮಾಯಮುಡಿ ಮಾನಿಲ್ ಅಯ್ಯಪ್ಪ ಯುವಕ ಸಂಘ, ಕಾವೇರಿ ಅಸೋಸಿಯೇಷನ್ ಹಾಗೂ ಧರ್ಮಸ್ಥಳ ಸಂಘಗಳ ಒಕ್ಕೂಟದ ವತಿಯಿಂದ ಸ್ವಚ್ಛ ಭಾರತ ಅಭಿಯಾನ ಹಾಗೂ ಪಂಜಿನ ಮೆರವಣಿಗೆ ತಾ. 14 ರಂದು ನಡೆಯಲಿದೆ.
ಚೆನ್ನಂಗೊಲ್ಲಿಯಿಂದ ಕೋಣನಕಟ್ಟೆವರೆಗೆ ಸ್ವಚ್ಛಭಾರತ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ 6ಕ್ಕೆ ಅಖಂಡ ಭಾರತ ಸಂಕಲ್ಪ ದಿವಸ ಆಚರಣೆ ಪ್ರಯುಕ್ತ ಕೋಲುಬಾಣೆಯಿಂದ ರಾಮಮಂದಿರದವರೆಗೆ ಪಂಜಿನ ಮೆರವಣಿಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.