ಶ್ರೀಮಂಗಲ, ಆ. 10: ತಮ್ಮ ಆಹಾರವನ್ನು ಕೊಂಡುಕೊಳ್ಳದೆ ಸ್ವತಃ ಬೆಳೆಸಿಕೊಳ್ಳುವ ಅವಕಾಶ ರೈತವರ್ಗಕ್ಕೆ ದೊರೆತಿರುವ ಭಾಗ್ಯ. ಆದರೆ, ಈ ಭಾಗ್ಯಗಳನ್ನು ಲಾಭ-ನಷ್ಟದ ಲೆಕ್ಕಚಾರದಿಂದ ಗದ್ದೆಗಳನ್ನು ಪಾಳು ಬಿಡುವ ಮೂಲಕ ಕಳೆದು ಕೊಳ್ಳಬಾರದು. ರೈತ ವರ್ಗ ಎಂದಿಗೂ ಹೆಮ್ಮೆಯಿಂದ ಬೆಳೆದು ತಿನ್ನಬೇಕೆ ಹೊರತು, ಕೊಂಡುಕೊಂಡು ಉಣ್ಣಬಾರದು. ಕೃಷಿ ಕುಟುಂಬದ ಮಕ್ಕಳು ಉನ್ನತ ವ್ಯಾsಸಂಗ ಮಾಡಿ ಎಷ್ಟೇ ದೊಡ್ಡ ಹುದ್ದೆ ಅಲಂಕರಿಸಿz Àರೂ, ತಮ್ಮ ಕೃಷಿಯತ್ತ ನಿರಾಸಕ್ತಿ ಬೆಳೆಸಿಕೊಳ್ಳದೆ ಅಭಿಮಾನವಿರಿಸಿ ಕೊಳ್ಳುವಂತೆ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್ಮಾಡ ರಾಜಿವ್ ಬೋಪಯ್ಯ ಅಭಿಪ್ರಾಯ ಪಟ್ಟರು.
ಅವರು ಯುಕೊ ಸಂಘಟನೆಯ ಗ್ರಾಮಾಭಿವೃದ್ಧಿ ವಿಭಾಗದ ರೂರಲ್ ಇನಿಶೇಟಿವ್ ಫಾರ್ ಸೋಶಿಯಲ್ ಎಂಪವರ್ಮೆಂಟ್(ರೈಸ್)ನ “ನಾಡ ಮಣ್ಣ್-ನಾಡ ಕೂಳ್” ಯೋಜನೆ ಯಡಿ ಕೊಡಗಿನ ಪಾಳು ಬಿಟ್ಟಿರುವ ಭತ್ತದ ಗದ್ದೆಯನ್ನು ಮತ್ತೆ ಕೃಷಿಗೆ ಪರಿವರ್ತಿಸಲು ವಿದ್ಯಾರ್ಥಿಗಳಲ್ಲಿ ಅರಿವು ಹಾಗೂ ಆಸಕ್ತಿ ಮೂಡಿಸಲು ಪೊನ್ನಂಪೇಟೆಯ ಕೊದೆಂಗಡ ರವಿ ಅವರ ಗದ್ದೆಯಲ್ಲಿ “ಆಕ ತೇಂವತ್ ಮಕ್ಕಡ ಆಟ್ಂಗಳಿ” ಎಂಬ ವಿನೂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಷ್ಟಪಟ್ಟು ದುಡಿಮೆ ಹಾಗೂ ಕೃಷಿಯತ್ತ ಅಭಿಮಾನವಿದ್ದಾಗ ತನ್ನಷ್ಟಕ್ಕೆ ಯಶಸ್ಸು ಕಾಣುತ್ತದೆ ಎಂದು ಹೇಳಿದ ಅವರು, ಕೃಷಿ ಪರಂಪರೆಯ ನಾವು ಕೃಷಿಯಲ್ಲಿ ಹಲವಾರು ಸವಾಲುಗಳನ್ನು ಎದುರಿಸಿ ಮುನ್ನಡೆದಾಗ ಯಶಸ್ಸು ಸಾಧ್ಯ ಎಂದರು.
ಮುಖ್ಯ ಅತಿಥಿ ಪೊನ್ನಂಪೇಟೆ ಕೊಡವ ಸಮಾಜದ ನಿರ್ದೇಶಕ-ಪ್ರಗತಿಪರ ರೈತ ಮಂಡೇಚಂಡ ದಿನೇಶ್ ಚಿಟ್ಟಿಯಪ್ಪ ಮಾತನಾಡಿ, ಕಾರ್ಮಿಕರ ಅಭಾವಕ್ಕೆ ಪರ್ಯಾ ಯವಾಗಿ ಇಂದು ಹಲವಾರು ಆಧುನಿಕ ತಂತ್ರಜ್ಞಾನ ಭತ್ತದ ಕೃಷಿಯಲ್ಲಿ ಬಂದಿವೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಭತ್ತದ ಕೃಷಿಯಲ್ಲಿ ಲಾಭಗಳಿಸಲು ಸಾಧ್ಯವಿದೆ. ಕೃಷಿಯನ್ನು ಯುವ ಪೀಳಿಗೆ ಕೈಬಿಡಬಾರದು. ಈ ಕೃಷಿ ಭೂಮಿಯನ್ನು ಮಾರಾಟ ಮಾಡದೆ ಕೃಷಿ ಪರಂಪರೆಯನ್ನು ಮುಂದುವರೆಸುವದು ನಮಗೆಲ್ಲರಿಗೂ ಗೌರವ ಹಾಗೂ ಹೆಮ್ಮೆ ಎಂದು ಹೇಳಿದರು.
ಕಾರ್ಯಕ್ರಮದ ಯೋಜನಾ ನಿರ್ದೇಶಕ ಚೆಪ್ಪುಡಿರ ಸುಜು ಕರುಂಬಯ್ಯ ಮಾತನಾಡಿ, ಕೊಡಗಿನಲ್ಲಿ ಪ್ರಕೃತಿಯು ಮಳೆ, ಗುಡುಗು, ಬಿಸಿಲು ಅತೀವೃಷ್ಟಿ-ಅನಾವೃಷ್ಟಿ ಮಾಡಿದರೂ ಅದರಿಂದ ಇಲ್ಲಿನ ಕೃಷಿ ಪರಂಪರೆಗೆ ಧಕ್ಕೆಯಾಗುವದಿಲ್ಲ ಎಂದರು. ಉತ್ಪಾದನ ವೆಚ್ಚ ಹೆಚ್ಚಳವೆಂದು ಭತ್ತದ ಕೃಷಿಯನ್ನು ನಿರ್ಲಕ್ಷಿಸುವದು ಸರಿಯಲ್ಲ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು ಕೃಷಿ ಪರಂಪರೆಯಲ್ಲಿ ಹುಟ್ಟಿದ ಪ್ರತಿಯೊಬ್ಬರು ಆ ಮಣ್ಣಿನೊಂದಿಗೆ ಸಂಬಂಧವಿಟ್ಟುಕೊಂಡಾಗ ಮಾತ್ರ ಸಾಧನೆ ಸಾಧ್ಯ. ಪ್ರತೀ ಊರು, ನಾಡು ಗಳಲ್ಲಿ ಈ ಭೂಮಿಗೆ
(ಮೊದಲ ಪುಟದಿಂದ) ಸಂಬಂಧಿಸಿದ ಒಂದೊಂದು ಹಬ್ಬ ಆಚರಿಸುವದನ್ನು ಕಾಣುತ್ತೇವೆ. ಆದರೆ, ಕೊಡಗಿನ ಸಂಸ್ಕøತಿಯಲ್ಲಿ ಬರುವ 6 ಹಬ್ಬಗಳು ಕೃಷಿಗೆ ಸಂಬಂಧಿಸಿರುವದೇ ಆಗಿರುವದು ವಿಶೇಷ. ಬೇದ ಚಂಗ್ರಾಂದಿ, ಎಡಮ್ಯಾರ್ ಚಂಗ್ರಾಂದಿ, ಕಕ್ಕಡ ಪದ್ನೆಟ್ಟ್, ಕೈಲ್ಪೆÇಳ್ದ್, ಕಾವೇರಿ ಚಂಗ್ರಾಂದಿ, ಪುತ್ತರಿ ಈ ಎಲ್ಲಾ ಹಬ್ಬಗಳು ಈ ಕೃಷಿ ಹಾಗೂ ಭೂಮಿಯ ಹಿನ್ನೆಲೆ ಹೊಂದಿದ್ದು, ಈ ಹಿನ್ನೆಲೆಯನ್ನು ಅರಿಯದೆ ನಾವು ಭೂಮಿಯನ್ನು ಪಾಳು ಬಿಟ್ಟಿದ್ದೇವೆ. ವಿಶ್ವವು ಕೊಡಗನ್ನು ಗೌರವ-ಆದಾರದಿಂದ ನೋಡಲು ನಮ್ಮ ಸಂಸ್ಕøತಿ ಕಾರಣವಾಗಿದೆ. ಆದರೆ, ಕೃಷಿ ಭೂಮಿ ಪಾಳು ಬಿಟ್ಟು ನಮ್ಮ ಸಂಸ್ಕøತಿಯನ್ನು ಉಳಿಸಿಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ಈ ಮಣ್ಣಿನ ಹಿರಿಮೆಯನ್ನು ಕಾಪಾಡಲು ಕೃಷಿ ಪರಂಪರೆಯನ್ನು ಮುಂದುವರೆಸ ಬೇಕಾಗಿದೆ ಎಂದು ಮಕ್ಕಳಿಗೆ ಹಿತವಚನ ಹೇಳಿದರು.
ಕಾರ್ಯಕ್ರಮದಲ್ಲಿ ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಲಯ ಹಾಗೂ ಗೋಣಿಕೊಪ್ಪ ಅರುವತ್ತೊಕ್ಲುವಿನ ಸರ್ವದೈವತಾ ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಗದ್ದೆಯಲ್ಲಿ ವಿದ್ಯಾರ್ಥಿಗಳಿಗೆ ಭತ್ತದ ಕೃಷಿಯ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು. ಯಾಂತ್ರಿಕೃತ ನಾಟಿ ಮಾಡುವ ಯಂತ್ರವನ್ನು ಸ್ವತಃ ಚಾಲನೆ ಮಾಡಿಕೊಂಡು ನಾಟಿ ಮಾಡಿ ಕೃಷಿಯ ಅನುಭವ ಪಡೆದರು.
ಸರ್ವದೈವತಾ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಮನೆಯಪಂಡ ಸುಬ್ಬಯ್ಯ, ಮಾಣಿಪಂಡ ಭೂಮಿಕ ಉತ್ತಪ್ಪ, ರಕ್ಷಿತ್ ವಿ.ಟಿ. ಅವರು ಮಾತನಾಡಿ, ಕೃಷಿಯು ಹೆಮ್ಮೆಯ ಕಸುಬಾಗಿದ್ದು, ವಿದ್ಯಾರ್ಥಿಗಳು ಎಷ್ಟೇ ಓದಿ ಉನ್ನತ ಸ್ಥಾನ ಪಡೆದರು ಕೃಷಿಯತ್ತ ನಿರ್ಲಕ್ಷವಹಿಸಬಾರದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸನ್ಮಾನ: ಕಳೆದ 2 ದಶಕದಿಂದ ಪ್ರಗತಿಪರ ರೈತ ಚೆಪ್ಪುಡಿರ ಸುಜು ಕರುಂಬಯ್ಯ ಅವರೊಂದಿಗೆ ಪಾಳು ಬಿಟ್ಟಿರುವ ಗದ್ದೆಗಳ ಪುನಃಶ್ಚೇತನ ಹಾಗೂ ಯಾಂತ್ರೀಕೃತ ಕೃಷಿ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸೇವೆ ನಿಡಿರುವ ವಿಜಯ್ ಅವರನ್ನು ಈ ಸಂದರ್ಭ ಶಾಲು ಹೊದಿಸಿ ಫಲತಾಂಬುಲ ನೀಡಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕೋದೆಂಗಡ ರೇವತಿರವಿ ಹಾಜರಿದ್ದರು. ಕಳ್ಳಿಚಂಡ ರಾಬಿನ್ಸುಬ್ಬಯ್ಯ ಸ್ವಾಗತಿಸಿ, ಉಳುವಂಗಡ ಲೋಹಿತ್ಭೀಮಯ್ಯ ಪ್ರಾರ್ಥಿಸಿ ವಂದಿಸಿದರು.