ಮಡಿಕೇರಿ, ಆ. 11: ಜಗತ್ತಿನಲ್ಲಿ ಭಾರತ ದೇಶಕ್ಕೆ ಯಾವ ದೇಶ ಕೂಡ ಸಮವಲ್ಲ ಭಾರತಕ್ಕೆ ಭಾರತ ಮಾತ್ರ ಸಮಾನವಾಗಿದೆ ಎಂದು ಎಸ್.ಎಸ್.ಎಫ್ ಕೊಡಗು ಜಿಲ್ಲಾ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಗರದಲ್ಲಿ ನಡೆದ ಆಝಾದಿ ರ್ಯಾಲಿಯಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಕರ್ನಾಟಕ ರಾಜ್ಯ ಎಸ್.ವೈ.ಎಸ್. ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನಿ ಕಕ್ಕಿಂಜೆ ಹೇಳಿದರು.ಭಾರತ ದೇಶವು ಒಂದು ಜಾತಿ ಧರ್ಮಕ್ಕೆ ಸೀಮಿತವಲ್ಲ.ಸರ್ವ ಜನಾಂಗದ ಶಾಂತಿಯ ತೋಟ ವಾಗಿದೆ. ಭಾರತದ ಮಣ್ಣು ಸರ್ವ ಜನಾಂಗದ ನೆಲೆಯಾಗಿದೆ. ನಾವೆಲ್ಲರೂ ಒಂದಾಗಿ ಭಾರತವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬೇಕಿದೆ ಎಂದರು.ಉದ್ಘಾಟನಾ ಭಾಷಣ ಮಾಡಿದ ಎಸ್.ಎಸ್.ಎಫ್. ರಾಜ್ಯ ಸಮಿತಿ ಸದಸ್ಯ ಯಾಕುಬ್ ಸಹದಿ ಹಾಗೂ ಮೌಲಾನ ಅಝಾದ್ ಮಾತನಾಡಿ, ಬಲಿಷ್ಟ ಭಾರತ ನಿರ್ಮಾಣ ಮಾಡಲು ಎಲ್ಲರೂ ಪಣ ತೊಡಬೇಕಾಗಿದೆ ಎಂದರು.ಕರ್ನಾಟಕ ರಾಜ್ಯ ಎಸ್.ಎಸ್.ಎಫ್. ಕ್ಯಾಂಪಸ್ ಕಾರ್ಯದರ್ಶಿ ಯಾಕುಬ್ ಮಾಸ್ಟರ್ ಮಾತನಾಡಿದರು.

ಸುದರ್ಶನ್ ವೃತ್ತದಿಂದ ಕಾವೇರಿ ಕಲಾ ಕ್ಷೇತ್ರದವರೆಗೆ ರ್ಯಾಲಿ ನಡೆಯಿತು.

ವೇದಿಕೆಯಲ್ಲಿ ಕರ್ನಾಟಕ ಎಸ್.ಎಸ್.ಎಫ್. ಅಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ರಾಜ್ಯ ಎಸ್.ವೈ.ಎಸ್. ರಾಜ್ಯ ಸಮಿತಿ ಸದಸ್ಯ ಉಮರ್ ಸಖಾಫಿ, ಅಹ್ಸನಿ ಅನ್ವಾರ್, ಎಸ್.ವೈ.ಎಸ್ ಜಿಲ್ಲಾಧ್ಯಕ್ಷ ಹಫೀಲ್ ಸಹದಿ, ಎಸ್.ಎಸ್.ಎಫ್. ಜಿಲ್ಲಾಧ್ಯಕ್ಷ ಕರೀಂ ಸಖಾಫಿ, ರಫೀಕ್ ಸಹದಿ ಸುಂಟಿಕೊಪ್ಪ, ಎಸ್.ಎಸ್.ಎಫ್ ಕಾರ್ಯದರ್ಶಿ ರಫೀಕ್ ನೆಲ್ಲಿಹುದಿಕೇರಿ, ಇಸ್ಮಾಯಿಲ್ ಝೈನಿ ಇದ್ದರು.

-ಕೆ.ಎಂ. ಇಸ್ಮಾಯಿಲ್