ಚೆಟ್ಟಳ್ಳಿ, ಆ. 11: ನಗರದ ಹೊಟೇಲ್, ಗ್ಯಾರೇಜ್, ಬಟ್ಟೆ ಅಂಗಡಿ, ಬೇಕರಿ, ಮನೆ ಮತ್ತು ವಾಣಿಜ್ಯ ಸಂಸ್ಥೆಗಳ ಮೇಲೆ ಹಾಗೂ ಬಿ. ಬಾಡಗ ಗ್ರಾಮದ ಸುತ್ತಮುತ್ತಲಿನ ಕಾಫಿ ತೋಟಗಳಿಗೆ ತೆರಳಿ ತೋಟದ ಮಾಲೀಕರಿಗೆ ಬಾಲ ಕಾರ್ಮಿಕ ಕಾಯ್ದೆ ಬಗ್ಗೆ ಅರಿವು ಮೂಡಿಸಿ ಎಚ್ಚರಿಸಲಾಯಿತು.

ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಸೊಸೈಟಿ ಕೊಡಗು ಜಿಲ್ಲೆ ವತಿಯಿಂದ ಕಾರ್ಯಾಚರಣೆ ನಡೆಸಲಾಯಿತು. ಬಾಲ ಕಾರ್ಮಿಕರನ್ನು ಯಾವದೇ ಕಾರಣಕ್ಕೂ ದುಡಿಸದಂತೆ ಮಾಡದಂತೆ ಅರಿವು ಮೂಡಿಸಲಾಯಿತು.

ಈ ಸಂದರ್ಭ ಮಾತನಾಡಿದ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಸಿರಾಜ್ ಅಹ್ಮದ್, ದಕ್ಷಿಣ ಕೊಡಗಿನ ವೀರಾಜಪೇಟೆ ನಗರದಲ್ಲಿ ವಿವಿಧಡೆ ತೆರಳಿ ಬಾಲ ಕಾರ್ಮಿಕ ಕಾಯ್ದೆ ಬಗ್ಗೆ ಅರಿವು ಮೂಡಿಸಿದ್ದೇವೆ ಎಂದರು.

ಈ ಸಂದರ್ಭ ತಾಲೂಕು ಕಾರ್ಮಿಕ ಇಲಾಖೆ ಹಿರಿಯ ನಿರೀಕ್ಷಕ ಮಹಾದೇವ ಸ್ವಾಮಿ, ವೀರಾಜಪೇಟೆ ತಹಶೀಲ್ದಾರ್ ಗೋವಿಂದ ರಾವ್, ಕಂದಾಯ ಇಲಾಖೆ ಪೂಜಾ ಎನ್.ಎಸ್., ಅರಸು ಬೋಪಯ್ಯ , ಎ.ಎಸ್.ಐ. ಮುತ್ತಣ್ಣ ಎಂ.ಸಿ. ಡಬ್ಲ್ಯೂಪಿಸಿರಾದ ವಿದ್ಯಾ ವಿ. ಬೆಳವಿ, ಗ್ರಾಮ ಲೆಕ್ಕಿಗರಾದ ಕಸ್ತೂರಿ ಮಡಿವಾಲ, ಪ್ರವೀಣ್‍ಕುಮಾರ್, ಬೀನಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.