ಮಡಿಕೇರಿ, ಆ. 11: ಅಶೋಕಪುರದ ಸಂತೋಷ್ ಯುವಕ ಸಂಘ ಹಾಗೂ ನೆಹರು ಯುವ ಕೇಂದ್ರದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತಾ. 12ರಂದು (ಇಂದು) ಅಶೋಕಪುರದಲ್ಲಿ ಶ್ರಮದಾನ ನಡೆಯಲಿದೆ ಎಂದು ಸಂತೋಷ್ ಯುವಕ ಸಂಘದ ಅಧ್ಯಕ್ಷ ಅವಿನ್ ಕುಮಾರ್ ತಿಳಿಸಿದ್ದಾರೆ.