*ಗೋಣಿಕೊಪ್ಪ, ಆ. 11: ಕಾಡಾನೆ ಧಾಳಿ ನೆಡೆಸಿ ಬೆಳೆ ನಾಶ ಪಡಿಸಿರುವ ಘಟನೆ ಮತ್ತೂರು ಗ್ರಾಮದ ಗುಂಡಿಕೊಲ್ಲಿಯಲ್ಲಿ ನಡೆದಿದೆ.
ಪೊನ್ನಂಪೇಟೆ ಸಮೀಪದ ಮತ್ತೂರು ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆಗಳ ಗುಂಪು ಕಾಫಿತೋಟಗಳಿಗೆ ನುಗ್ಗಿ ಫಸಲು ನಾಶಪಡಿಸುತ್ತಿವೆ. ತೆಂಗು, ಬಾಳೆಗಿಡಗಳು ಸಹ ನಾಶವಾಗುತ್ತಿವೆ. ಅಜೀಜ್, ಮನೆಯಪಂಡ ರಾಜ, ಪುಚ್ಚಿಮಾಡ ವಸಂತ, ರಾಜೇಶ್ ಅವರ ತೋಟಗಳ ಮೇಲೆ ಆನೆ ಧಾಳಿ ನಡೆಸಿ ತೆಂಗು, ಬಾಳೆಗಿಡಗಳನ್ನು ನಾಶಪಡಿಸಿವೆ ಎಂದು ಅಜೀಜ್ ಮಾಹಿತಿ ನೀಡಿದ್ದಾರೆ.
ಹಗಲಿನಲ್ಲಿ ಆನೆಗಳು ಮನೆಯ ಮುಂಭಾಗದ ರಸ್ತೆಗಳಲ್ಲಿ ಓಡಾಡುವದರಿಂದ ಸಂಚಾರಕ್ಕೆ ಸಮಸ್ಯೆ ಆಗಿದೆ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೊಗಲು ಸಾಧ್ಯವಾಗದ ವಾತಾವರಣ ನಿರ್ಮಾಣವಾಗಿದೆ. ಗ್ರಾಮದಲ್ಲೇ ಮೂರು ಆನೆ ಮತ್ತೊಂದು ಮರಿ ಆನೆ ಸೇರಿ ನಾಲ್ಕು ಆನೆಗಳು ವಾಸ್ತವ್ಯ ಮಾಡಿವೆ ಎಂದು ಹೇಳಿದ್ದಾರೆ. ಶೀಘ್ರವೆ ಕಾಡಾನೆ ಓಡಿಸಲು ಅರಣ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.