ವೀರಾಜಪೇಟೆ, ಆ. 10: ಎಲ್ಲಾ ಕೊಡವ ಸಮಾಜಗಳಲ್ಲಿ ಪೊಮ್ಮಕ್ಕಡ ಕೂಟ ಎಂಬ ಒಕ್ಕೂಟಗಳು ಚಾಲ್ತಿಯಲ್ಲಿದ್ದು, ವೀರಾಜಪೇಟೆ ಕೊಡವ ಸಮಾಜದಲ್ಲೂ ಅಂತಹ ಮಹಿಳಾ ಘಟಕದ ಒಕ್ಕೂಟವನ್ನು ಕೊಡವ ಸಮಾಜ ಸಹಯೋಗದೊಂದಿಗೆ ರಚಿಸಲಾಗಿದ್ದು ಅಧಿಕೃತವಾಗಿ ತಾ. 12 ರಂದು ವೀರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಕೊಡವ ಪೊಮ್ಮಕ್ಕಡ ಒಕ್ಕೂಟವನ್ನು ಉದ್ಘಾಟಿಸಲಾಗುವದು ಎಂದು ಒಕ್ಕೂಟದ ಅಧ್ಯಕ್ಷೆ ಮನಿಯಪಂಡ ಕಾಂತಿ ಸತೀಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂತಿ ಸತೀಶ್ ಕೊಡವ ಸಮಾಜದ ಸಹಯೋಗದೊಂದಿಗೆ ವೀರಾಜಪೇಟೆ ಕೊಡವ ಸಮಾಜದ ಅಧೀನದಲ್ಲಿ ಪೊಮ್ಮಕ್ಕಡ ಒಕ್ಕೂಟವನ್ನು ಸ್ಥಾಪಿಸುವಂತೆ ಕಳೆದ ಕೊಡವ ಸಮಾಜದ ಮಹಾಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಈಗಾಗಲೇ 100ಕ್ಕೂ ಅಧಿಕ ಕೊಡವ ಮಹಿಳೆಯರು ಸದಸ್ಯತ್ವ ಪಡೆದುಕೊಂಡಿದ್ದಾರೆ. ಭಾಷೆ, ಆಚಾರ, ವಿಚಾರ, ಸಾಹಿತ್ಯ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪೊಮ್ಮಕ್ಕಡ ಪಾತ್ರ ಮಹತ್ವವಾದದ್ದು ಎಂದರು. ಮುಖ್ಯ ಅತಿಥಿಗಳಾಗಿ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ, ಮಾಜಿ ಅಧ್ಯಕ್ಷರು ಹಿರಿಯರು ಆದ ನಾಯಡ ವಾಸು ನಂಜಪ್ಪ, ಹಿರಿಯ ಸಾಹಿತಿ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ಇನ್ನಿತರ ಪ್ರಮುಖರು ಪಾಲ್ಗೊಳ್ಳಲಿರುವದಾಗಿ ಹೇಳಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಯಪ್ಪ, ಖಜಾಂಜಿ ಪೊಯ್ಯೆಟಿರ ಭಾನು ಭೀಮಯ್ಯ ಉಪಸ್ಥಿತರಿದ್ದರು.
ಒಕ್ಕೂಟಕ್ಕೆ ಆಯ್ಕೆ
ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷರಾಗಿ ಮನಿಯಪಂಡ ಕಾಂತಿ ಸತೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪಳೆಯಂಡ ಮನು ಸುಬ್ಬಯ್ಯ, ಕಾರ್ಯದರ್ಶಿಯಾಗಿ ಬಯವಂಡ ಇಂದಿರಾ ಬೆಳ್ಯಪ್ಪ, ಖಜಾಂಜಿಯಾಗಿ ಪೊಯ್ಯೆಟೀರ ಭಾನು ಭೀಮಯ್ಯ, ವಿಶೇಷ ಅಹ್ವಾನಿತರಾಗಿ ಬೊವ್ವೇರಿಯಂಡ ಆಶಾ ಸುಬ್ಬಯ್ಯ, ಪಟ್ರಪಂಡ ಗೀತಾ ಬೆಳ್ಯಪ್ಪ, ಮುಕ್ಕಾಟ್ಟಿರ ದಮಯಂತಿ ಮಂದಣ್ಣ, ನಿರ್ದೇಶಕರಾಗಿ ನೆಲ್ಲಮಕ್ಕಡ ರತಿ, ಸಲಹೆಗಾರರಾಗಿ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ, ಚಲ್ಮಂಡ ಗೌರಿ ಮೊಣ್ಣಪ್ಪ, ನಿರ್ದೇಶಕರಾಗಿ ನೆಲ್ಲಮಕ್ಕಡ ರತಿ, ಮಾಳೇಟಿರ ಕವಿತಾ ಶ್ರೀನಿವಾಸ್, ತಾತಂಡ ಯಶು ಕಬೀರ್, ತಾತಂಡ ಪ್ರಭಾ ನಾಣಯ್ಯ, ಮುಂಡ್ಯೋಳಂಡ ಕುಸುಮಾ ಸೋಮಣ್ಣ, ಕುಂಞÂರ ಸ್ವಾತಿ ಸನ್ನಿ, ಮುರುವಂಡ ಉಷಾ ಮೊಣ್ಣಪ್ಪ, ಮಾಳೇಟಿರ ಕಸ್ತೂರಿ ಕಾವೇರಪ್ಪ, ಮಾಳೇಟಿರ ಕಾಂತಿ ಕರುಂಬಯ್ಯ, ಪೆಬ್ಬಾಟಂಡ ಹೇಮಾ ಚಂಗಪ್ಪ ಆಯ್ಕೆಯಾಗಿದ್ದಾರೆ.
.