ನಾಪೋಕ್ಲು, ಆ. 10: ಬೇತು ಗ್ರಾಮದ ನಿವಾಸಿ ಚೋಕಿರ ಪ್ರಭು ಪೂವಪ್ಪ ಮತ್ತು ಗಣೇಶ್ ಎಂಬವರಿಗೆ ಸೇರಿದ 3 ಹಸು, ಕರುಗಳು ಇಂದು ಅಕಸ್ಮಿಕವಾಗಿ ನಗರಕ್ಕೆ ದಾರಿ ತಪ್ಪಿ ಬಂದು ನಗರದಲ್ಲಿ ವಿಷಾಹಾರದಿಂದ ಸಾವನ್ನಪ್ಪಿದ್ದ ದೃಶ್ಯ ಮನ ಕಲುಕುವಂತಿತ್ತು. ಇಂದು ಬೆಳಿಗ್ಗೆ ಕೊಟ್ಟಿಗೆಯಿಂದ ತಪ್ಪಿಸಿಕೊಂಡ ಹಸು, ಕರುಗಳು ಸುಮಾರು ಅರ್ಧ ಕಿ.ಮೀ. ದೂರದ ನಾಪೆÇೀಕ್ಲು ನಗರಕ್ಕೆ ಬಂದಿದ್ದು, ಮಧ್ಯಾಹ್ನದವರೆಗೂ ಗಾಬರಿಯಿಂದ ಅಲ್ಲಿ ಇಲ್ಲಿ ತಿರುಗಿಕೊಂಡಿದ್ದವು. ನಂತರ ನಗರದ ಬಾರ್ ಒಂದರ ಬಳಿಯಲ್ಲಿ ಹಸುವೊಂದು ಬಿದ್ದು ಹೊರಳಾಡಿ ಕೆಲವೇ ಹೊತ್ತಿನಲ್ಲಿ ಪ್ರಾಣ ಬಿಟ್ಟಿದೆ. ಇದರ ಬಾಯಲ್ಲಿ ನೊರೆ ಕಾಣಿಸಿಕೊಂಡಿದ್ದು, ನಂತರದಲ್ಲಿ ಇದರ ಕರುವೊಂದು ಪಕ್ಕಕ್ಕೆ ದಾವಿಸಿ ತನ್ನ ತಾಯಿಯನ್ನು ಎಬ್ಬಿಸಲು ತಾಯಿಯ ದೇಹವನ್ನು ನೆಕ್ಕಿ ಏಳುವಂತೆ ಪ್ರೇರೇಪಿಸಿದೆ. ಆದರೂ ತಾಯಿ ಮೇಲೆಳಲ್ಲಿಲ್ಲ ನಂತರದ ಕೆಲವೇ ಕ್ಷಣದಲ್ಲಿ ಈ ಕರು ಸಹ ತಾಯಿಯ ಪಕ್ಕದಲ್ಲೇ ಬಿದ್ದು ಪ್ರಾಣ ಕಳೆದುಕೊಂಡಿತ್ತು. ಅದರಂತೆ ಇನ್ನೊಂದು ಕರು ಸಹ ಅನತಿ ದೂರದಲ್ಲಿ ಸಾವನಪ್ಪಿದ್ದು, ಇದೊಂದು ಅವಮಾನವೀಯ ಕೃತ್ಯವಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ. ನಾಪೆÇೀಕ್ಲು ನಗರದಲ್ಲಿ ಇಂತಹ ಅಮಾನುಷ್ಯ ಕೃತ್ಯ ನಡೆದಿರುವದು ಇದೇ ಮೊದಲ ಬಾರಿಯಾಗಿದೆ. (ಮೊದಲ ಪುಟದಿಂದ) ಗ್ರಾಮಸ್ಥರ ಆಕ್ರೋಶ : ಈ ಘಟನೆಗೆ ಗ್ರಾಮ ಪಂಚಾಯಿತಿ ಆಡಳಿತವೇ ನೇರ ಹೊಣೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮ ಪಂಚಾಯಿತಿ ಆಡಳಿತ ಪಟ್ಟಣದ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿಲ್ಲ. ಅದರೊಂದಿಗೆ ಬಿಡಾಡಿ ದನ, ನಾಯಿ ಹಾವಳಿ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೂಡಲೇ ಈ ಬಗ್ಗೆ ಗ್ರಾ.ಪಂ. ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. - ದುಗ್ಗಳ, ಪ್ರಭಾಕರ್