ಮಡಿಕೇರಿ, ಆ. 10: ಮಡಿಕೇರಿ ತಾಲೂಕು ಅರಪಟ್ಟು ಪೊದ್ದಮಾನಿ ಗ್ರಾಮದ ಬಿದ್ದೇರಿಯಂಡ ಕಾವೇರಪ್ಪ ಅವರ ಭತ್ತದ ಗದ್ದೆಯಲ್ಲಿ ಯಾಂತ್ರೀಕೃತ ನಾಟಿಯ ಪ್ರಾತ್ಯಕ್ಷಿಕೆಯನ್ನು ವಿಸ್ತರಣಾ ಶಿಕ್ಷಣ ಫಟಕ ಮಡಿಕೇರಿ ವತಿಯಿಂದ ನಡೆಸಲಾಯಿತು.

ಪ್ರಾತ್ಯಕ್ಷಿಕೆಯಲ್ಲಿ ಸ್ಥಳಿಯ ರೈತರು, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಸ್ಥಾಯಿ ಶಿಕ್ಷಣ ಸಾಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ ಕಾರ್ಯಪ್ಪ, ಸ್ಥಳೀಯ ಗ್ರಾಮ ಪಂಚಾಯಿತಿ ಸದ್ಯಸೆ ವಾಣಿ ತಮ್ಮಯ್ಯ, ಕೃಷಿ ಇಲಾಖೆಯ ತಾಂತ್ರಿಕ ಆಧಿಕಾರಿ ಗಿರೀಶ್, ವಿಸ್ತರಣಾ ಶಿಕ್ಷಣ ಫಟಕ ಮುಖ್ಯಸ್ಥ ಡಾ. ಆರ್.ಎನ್. ಕೆಂಚರೆಡ್ಡಿ ಮತ್ತು ಪೊನ್ನಂಪೇಟೆ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಹೊಸಗೌಡ ಹಾಜರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಯು.ಕೆ.ಒ. ಸಂಘಟನೆಯ ಸುಜು ಕರುಂಬಯ್ಯ ಅವರು ಯಾಂತ್ರಿಕೃತ ನಾಟಿಯ ಅನುಕೂಲತೆಗಳ ಬಗ್ಗೆ ವಿವರಿಸಿದರು. ಕೃಷಿ ಇಲಾಖೆಯಿಂದ ದೊರೆಯುವ ವಿವಿಧ ಸವಲತ್ತುಗಳ ಬಗ್ಗೆ ತಾಂತ್ರಿಕ ಅಧಿಕಾರಿ ಗಿರೀಶ್ ಮಾಹಿತಿ ನೀಡಿದರು. ಬಿದ್ದೇರಿಯಂಡ ಸುಶೀಲ ಕಾವೇರಪ್ಪ ನಿರೂಪಿಸಿ, ವಂದಿಸಿದರು. ಪೊದ್ದಮಾನಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸುಮಾರು 50 ಜನ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದರು.