ಶನಿವಾರಸಂತೆ, ಆ. 10: ಪ್ರೀತಿಸಿ ಮದುವೆಯಾದ ನವವಿವಾಹಿತೆ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಕ್ಯಾತ್ನಳ್ಳಿ ಗ್ರಾಮದ ರಾಣಿ ಎಂಬವರ ಮಗಳು ಕೃತಿಕಾ ಸುಮಾರು ಒಂದೂವರೆ ವರ್ಷದ ಹಿಂದೆ ಒಡೆಯನಪುರ ಗ್ರಾಮದ ಆಟೋ ಚಾಲಕ ಡಿಲಕ್ಷ ಯಾನೆ ನಂದ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ತಾ. 9 ರಂದು ಸಂಜೆ ಮಲಗುವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ಯಾರೊಂದಿಗೆ ಮೊಬೈಲ್‍ನಲ್ಲಿ ಹೆಚ್ಚಿಗೆ ಮಾತನಾಡುತ್ತಿರುವ ಬಗ್ಗೆ ಸಂಶಯಗೊಂಡ ಗಂಡ ವಿರೋಧಿಸಿ ಮೊಬೈಲನ್ನು ಕಿತ್ತು ಇಟ್ಟ್ಟುಕೊಂಡಿದ್ದ ಎನ್ನಲಾಗಿದೆ.ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ತಾಯಿ ರಾಣಿ ನೀಡಿದ ದೂರಿನ ಅನ್ವಯ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ಮೊಬೈಲನ್ನು ವಶಪಡಿಸಿಕೊಂಡು, ಆಕೆಯ ಗಂಡ ಡಿಲಕ್ಷ ಯಾನೆ ನಂದನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಸ್ಥಳಕ್ಕೆ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಮಹೇಶ್, ಡಿವೈಎಸ್‍ಪಿ ಮುರುಳಿಧರ್, ವೃತ್ತ ನಿರೀಕ್ಷಕ ನಂಜುಂಡೇಗೌಡ ಭೇಟಿ ನೀಡಿದ್ದರು.