ಗೋಣಿಕೊಪ್ಪ, ಆ. 10: ಕೃಷಿ ಪರಿಕರ ಮಾರಾಟಗಾರರ ಕೃಷಿ ವಿತರಣಾ ಸೇವೆಯ ಡಿಪ್ಲೊಮಾ ಪರೀಕ್ಷೆಯ ಪದವಿಧರರಿಗೆ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಪದವಿ ಪ್ರದಾನ ಮಾಡಲಾಯಿತು.

ಪದವಿ ಪ್ರದಾನ ಮಾಡಿದ ರಾಜ್ಯ ನೋಡೆಲ್ ಅಧಿಕಾರಿ ಡಾ. ಪೆನ್ನಬೋಲಿಸ್ವಾಮಿ ಮಾತನಾಡಿ, ಡಿಪ್ಲೊಮಾ ಪರೀಕ್ಷೆಯ ಉದ್ದೇಶ ಮಾರಾಟಗಾರರು ಮತ್ತು ಕೃಷಿಕರ ನಡುವೆ ಸಂಬಂಧ ಬೆಸೆಯುವದು ಎಂದರು.

ಡಾ. ನಾರಾಯಾಣ್, ಡಾ. ಶಿವಕುಮಾರ್, ಡಾ. ಎಂ.ಆರ್. ದಿನೇಶ್ ಮಾತನಾಡಿ, ಈ ತರಬೇತಿ ಹೊಸ ಆವಿಷ್ಕಾರಗಳಿಗೆ ಮುನ್ನುಡಿಯಾಗಲಿದೆ ಎಂದರು.

ಈ ಸಂದರ್ಭ ಪ್ರಥಮ ರ್ಯಾಂಕ್ ವಿಜೇತೆ ಕೃಪಾ ಎಂ.ಇ. ಅವರಿ ಪದವಿ ಪ್ರದಾನದೊಂದಿಗೆ ಸರ್ಟಿಫಿಕೇಟ್ ನೀಡಲಾಯಿತು. ಒಟ್ಟು ಸುಮಾರು ನಲವತ್ತು ಪರೀಕ್ಷಾರ್ಥಿಗಳು ಪದವಿ ಸ್ವೀಕರಿಸಿದರು. ಡಾ. ಪ್ರಭಾಕರ್ ಮತ್ತು ಸೋಮಣ್ಣ ಚಿಟ್ಟಿಯಪ್ಪ ನಿರೂಪಿಸಿದರು.